½ ಕೆ.ಜಿಯಷ್ಟು ಅಲಸಂದೆ ಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ, ½ ಟೀ ಸ್ಪೂನ್-ಸಾಸಿವೆ, ½ ಟೀ ಸ್ಪೂನ್-ಉದ್ದಿನಬೇಳೆ. ½ ಟೀ ಸ್ಪೂನ್-ಕಡಲೆಬೇಳೆ, 2 ಟೇಬಲ್ ಸ್ಪೂನ್-ಎಣ್ಣೆ, ಅರಿಶಿನ-1/4 ಟೀ ಸ್ಪೂನ್, ಕರಿಬೇವು-8 ಎಸಳು, 1 ಟೀ ಸ್ಪೂನ್-ಸಾಸಿವೆ, ¼ ಕಪ್ ತೆಂಗಿನಕಾಯಿ ತುರಿ, 8-ಬ್ಯಾಡಗಿ ಮೆಣಸು, ಹುಣಸೆಹಣ್ಣು-1 ಲಿಂಬೆಹಣ್ಣು ಗಾತ್ರದ್ದು (ನೆನೆಸಿಟ್ಟುಕೊಂಡಿರಿ), ಬೆಲ್ಲದ ಪುಡಿ-2 ಟೇಬಲ್ ಸ್ಪೂನ್, ಕೊತ್ತಂಬರಿಸೊಪ್ಪು-ಸ್ವಲ್ಪ, ನೀರು-1 ½ ಕಪ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಹಾಕಿ ನಂತರ ಕರಿಬೇವು, ಅರಿಶಿನ ಹಾಕಿ ಸ್ವಲ್ಪ ಮಿಕ್ಸ್ ಮಾಡಿ. ನಂತರ ಹೆಚ್ಚಿಟ್ಟುಕೊಂಡ ಅಲಸಂದೆ ಹಾಕಿ ಮಿಶ್ರಣ ಮಾಡಿ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ಒಂದು ಮುಚ್ಚಳ ಮುಚ್ಚಿ ಬೇಯಿಸಿ. ತಳ ಹತ್ತದಂತೆ ಆಗಾಗ ಕೈಯಾಡಿಸುತ್ತಾ ಇರಿ. ನಂತರ ಇದಕ್ಕೆ ಹುಣಸೆಹಣ್ಣಿನ ರಸ ಸೇರಿಸಿ ಉಪ್ಪು, ಬೆಲ್ಲ ಹಾಕಿ ಮಿಕ್ಸ್ ಮಾಡಿ.
ಒಂದು ಮಿಕ್ಸಿ ಜಾರಿಗೆ ಸಾಸಿವೆ, ಕಾಯಿತುರಿ, ಮೆಣಸು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಬೆಂದ ಅಲಸಂದೆಗೆ ಸೇರಿಸಿ 4 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಕೊತ್ತಂಬರಿಸೊಪ್ಪು ಸೇರಿಸಿದರೆ ಪಲ್ಯ ಸವಿಯಲು ಸಿದ್ಧ.