ಪಾಲಕ್ ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರೋಟಿ ಜತೆಗ ಇದನ್ನು ತಿನ್ನಲು ಸಖತ್ ಆಗಿರುತ್ತದೆ. ಅದು ಅಲ್ಲದೇ, ಪಾಲಕ್ ಹಾಗೂ ಪನ್ನೀರ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಇದು ದೇಹದ ಆರೋಗ್ಯಕ್ಕೂ ಕೂಡ ತುಂಬ ಒಳ್ಳೆಯದು.
1 ಕಟ್ಟು ಪಾಲಕ್, 2 ಕಪ್-ಚಿಕ್ಕದ್ದಾಗಿ ಕತ್ತರಿಸಿಕೊಂಡ ಪನ್ನೀರ್, 1 ಟೇಬಲ್ ಸ್ಪೂನ್- ತುಪ್ಪ, 1 ಟೀ ಸ್ಪೂನ್-ಜೀರಿಗೆ, 1-ಹಸಿಮೆಣಸು, 1-ಈರುಳ್ಳಿ, 5 ಎಸಳು- ಬೆಳ್ಳುಳ್ಳಿ, 1 ಇಂಚು-ಶುಂಠಿ, 1-ಟೊಮೆಟೊ, ¼ ಕಪ್-ನೀರು, 1 ಟೀ ಸ್ಪೂನ್-ಗರಂ ಮಸಾಲ, ½ ಟೀ ಸ್ಪೂನ್-ಅರಿಶಿನ, ½ ಟೀ ಸ್ಪೂನ್-ಕೆಂಪು ಮೆಣಸಿನಪುಡಿ, 1 ಟೀ ಸ್ಪೂನ್-ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಒಂದು ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೆ ಜೀರಿಗೆ ಹಾಕಿ.
ನಂತರ ಇದಕ್ಕೆ ಬೆಳ್ಳುಳ್ಳಿ, ಜಜ್ಜಿಕೊಂಡ-ಶುಂಠಿ, ಹಸಿಮೆಣಸು, ಈರುಳ್ಳಿ, ಹಾಕಿ 2 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಇದಕ್ಕೆ ನೀರು, ಪಾಲಕ್ ಸೇರಿಸಿ 4 ನಿಮಿಷಗಳ ಕಾಲ ಹಾಗೇ ಬಿಡಿ. ಇದು ಸ್ವಲ್ಪ ಕುದಿಯಲಿ.
ನಂತರ ಗ್ಯಾಸ್ ಆಫ್ ಮಾಡಿ. ಇದು ಸ್ವಲ್ಪ ತಣ್ಣಗಾದ ಒಂದು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಪನ್ನೀರ್, ಗರಂ ಮಸಾಲ ಸೇರಿಸಿ ಸ್ವಲ್ಪ ಕುದಿಸಿಕೊಳ್ಳಿ. ರುಚಿಕರವಾದ ಪಾಲಕ್ ಪನ್ನೀರ್ ಸವಿಯಲು ಸಿದ್ಧ.