alex Certify ‘ಆಹಾರ’ ಸೇವನೆಗಿರಲಿ ಸರಿಯಾದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಹಾರ’ ಸೇವನೆಗಿರಲಿ ಸರಿಯಾದ ಕ್ರಮ

ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ ಎನ್ನುವಂತೆ ಹಸಿವಾದಾಗ ಊಟವನ್ನು ಮಾಡಬೇಕು. ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ ಕ್ರಮ ಕೂಡ ಮುಖ್ಯವಾಗಿದೆ. ಸಿಕ್ಕಿದ್ದನ್ನೆಲ್ಲಾ ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಬದಲು ನಿಯಮಿತವಾಗಿ ಆಹಾರ ಸೇವಿಸುವುದು ಒಳ್ಳೆಯದು.

ರಾಜನಂತೆ ಬೆಳಗಿನ ಉಪಹಾರವನ್ನು ಸೇವಿಸಬೇಕು. ಸಾಮಾನ್ಯನಂತೆ ಮಧ್ಯಾಹ್ನದ ಊಟ ಹಾಗೂ ಬಡವನಂತೆ ರಾತ್ರಿ ಊಟ ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಊಟ-ತಿಂಡಿಯ ನಡುವೆ ಸಮಯದ ಅಂತರವಿರಬೇಕು. ಊಟವಾದ ಅಥವಾ ತಿಂಡಿ ತಿಂದ ಕೆಲ ಸಮಯದಲ್ಲೇ ಮತ್ತೆ ತಿನ್ನುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ.

ದೈಹಿಕ ಶ್ರಮದ ಕೆಲಸ, ಕಠಿಣ ಕೆಲಸ ಮಾಡುವವರು, ಹೊಲಕ್ಕೆ ಹೋಗುವವರು ಸ್ವಲ್ಪ ತಿಂಡಿ ತಿಂದು ದಿನವಿಡೀ ದುಡಿಯಲು ಸಾಧ್ಯವಾಗುವುದಿಲ್ಲ. ಅಂತಹವರು ಬೆಳಿಗ್ಗೆಯೇ ಹೊಟ್ಟೆ ತುಂಬ ಊಟ ಮಾಡಿದರೆ ಅನುಕೂಲವಾಗುತ್ತದೆ. ದಿನವಿಡಿ ದುಡಿಯಲು ಚೈತನ್ಯ ಸಿಗುತ್ತದೆ. ಕುಳಿತು ಕೆಲಸ ಮಾಡುವವರು ತಮ್ಮ ಆಹಾರದ ಕ್ರಮದಲ್ಲಿ ಕೆಲವು ನಿಯಮ ಅನುಸರಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

ಹಸಿವಾಗುವ ವೇಳೆಗೆ ಊಟ ಮಾಡಿದಲ್ಲಿ ಒಳ್ಳೆಯದು, ಹಸಿವು ಜಾಸ್ತಿಯಾದಾಗ ಊಟಕ್ಕೆ ಕುಳಿತರೆ ಜಾಸ್ತಿ ಸೇರುವುದಿಲ್ಲ. ಹಸಿವಾಗುವ ಮೊದಲೇ ಊಟ ಮಾಡುವುದೂ ಕೂಡ ಒಳ್ಳೆಯದಲ್ಲ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಗಳಿಗೆ ನೀವೇ ಸಮಯ ನಿಗದಿ ಮಾಡಿಕೊಂಡಲ್ಲಿ ಒಳ್ಳೆಯದು. ಹಸಿವಾದ ಸಂದರ್ಭದಲ್ಲಿ ಹೆಚ್ಚಿನವರು ಊಟ ಮಾಡುವ ಬದಲು ಹೆಚ್ಚಾಗಿ ಕಾಫಿ, ಟೀ ಕುಡಿಯುತ್ತಾರೆ. ಇದರಿಂದ ಹಸಿವು ದೂರ ಮಾಡಬಹುದೆಂಬುದು ಅವರ ಭಾವನೆ. ಆದರೆ, ಇದೇ ಅತಿಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಊಟ, ತಿಂಡಿಯ ವಿಚಾರದಲ್ಲಿ ಗಮನವಿರಲಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...