alex Certify ಅಲರ್ಜಿ ಇರುವವರು ಈ ʼಆಹಾರʼವನ್ನು ಸೇವಿಸಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲರ್ಜಿ ಇರುವವರು ಈ ʼಆಹಾರʼವನ್ನು ಸೇವಿಸಿ ನೋಡಿ

ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಲು ನಾವು ಆಹಾರವನ್ನು ಸೇವಿಸಬೇಕು.

ಕೆಲವರಿಗೆ ಆಹಾರ ಅಲರ್ಜಿ ಸಮಸ್ಯೆ ಇರುತ್ತದೆ. ಅವರು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಯಾವುದಾದರೂ ಸಮಸ್ಯೆ ಕಾಡುತ್ತದೆ. ಅಂತವರು ಆ ಆಹಾರದ ಬದಲಿಗೆ ಅಷ್ಟೇ ಪೋಷಕಾಂಶಗಳನ್ನೊಳಗೊಂಡ ಬೇರೆ ಆಹಾರವನ್ನು ಸೇವಿಸಬಹುದು. ಆ ಬದಲಿ ಆಹಾರಗಳು ಯಾವುದೆಂಬುದನ್ನು ತಿಳಿಯೋಣ.

*ಮೊಟ್ಟೆಗಳಲ್ಲಿ ಪ್ರೋಟಿನ್ ಗಳು ಅಧಿಕವಾಗಿರುತ್ತದೆ. ಆದರೆ ನಿಮಗೆ ಮೊಟ್ಟೆ ಅಲರ್ಜಿಯಾದರೆ ಅದರ ಬದಲಿಗೆ ದ್ವಿದಳ ಧಾನ್ಯಗಳು, ಸೋಯಾಬಿನ್, ಬಾಳೆಹಣ್ಣು, ಒಣದ್ರಾಕ್ಷಿ, ಸೇಬು, ಅಗಸೆ ಬೀಜಗಳನ್ನು ಸೇವಿಸಬಹುದು.

*ಡೈರಿ ಉತ್ಪನ್ನಗಳ ಅಲರ್ಜಿ ಹೊಂದಿದ್ದರೆ ಬಾದಾಮಿ, ಸೋಯಾ ಹಾಲು, ತೆಂಗಿನ ಹಾಲನ್ನು ಬಳಸಬಹುದು.

* ಕಡಲೆಕಾಯಿ ಅಲರ್ಜಿಯಾದರೆ ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜಗಳನ್ನು ಬಳಸಬಹುದು.

*ಗೋಧಿ ಅಲರ್ಜಿಯಾದರೆ ಅದರ ಬದಲಿಗೆ ಕಂದು ಅಕ್ಕಿ ಅಥವಾ ರಾಗಿ ಮುಂತಾದ ಧಾನ್ಯಗಳಿಗೆ ಬದಲಾಯಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...