ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ.
ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ ಮೂಗಲ್ಲಿ ಸ್ರಾವ ಉಂಟಾಗುವವರು ನಿಮ್ಮ ದೈನಂದಿನ ಊಟದಲ್ಲಿ ಸುಣ್ಣ ಸೇರಿಸಿಕೊಳ್ಳಿ.
ಇನ್ನು ಕೂತಾಗ ನಿಂತಾಗ ಮೂಳೆಗಳು ಶಬ್ಧ ಮಾಡುತ್ತಿದ್ದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದೆ ಎಂದರ್ಥ. ಇಂತವರು, ಸುಣ್ಣವನ್ನು ದಾಳಿಂಬೆ ರಸದ ಜೊತೆ ಕುಡಿಯುತ್ತಾ ಇದ್ದರೆ ಒಳ್ಳೆಯದು. ಮಲಬದ್ಧತೆ ಸಮಸ್ಯೆಯನ್ನು ಬಗೆಹರಿಸಲು ಮತ್ತು ಜೀರ್ಣ ಕ್ರಿಯೆಯನ್ನು ಸಮತೋಲನದಲ್ಲಿ ಇಡಲು ಇದು ಸಹಕಾರಿ.
7 ತಿಂಗಳು ತುಂಬಿದ ಗರ್ಭಿಣಿಯರು ನಿಯಮಿತವಾಗಿ ಸುಣ್ಣವನ್ನು ತಪ್ಪದೇ ತಿನ್ನಿ. ಇದು ಗರ್ಭಿಣಿ ಮತ್ತು ಹುಟ್ಟುವ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಲವು ಮಕ್ಕಳಲ್ಲಿ ಮಂದ ಬುದ್ದಿ, ಕಡಿಮೆ ಚುರುಕುತನ ಇರುತ್ತದೆ ಅಥವಾ ಕಡಿಮೆ ಕಾರ್ಯ ಶೀಲತೆ ಇರುತ್ತದೆ ಅಂತಹ ಮಕ್ಕಳ ಡಯಟ್ ನಲ್ಲಿ ಸುಣ್ಣವನ್ನು ಸೇರಿಸಿ. ಆಲ್ಕೋಹಾಲ್ ರೋಗಿಯ ಒಳ ಅಂಗಾಂಗಗಳು ಮತ್ತೆ ಚೇತರಿಸಿಕೊಳ್ಳಲು ಸುಣ್ಣ ಬಲು ಉಪಯೋಗಕಾರಿ.