ಕೆಲವೊಮ್ಮೆ ಆಹಾರ ಬೇಯಿಸುವಾಗ ತಳ ಹಿಡಿದು ವಾಸನೆ ಬರುತ್ತದೆ. ಅನೇಕರು ಅತಿಥಿಗಳನ್ನು ಊಟಕ್ಕೆಂದು ಮನೆಗೆ ಕರೆಯುತ್ತೀರಿ. ಆಗ ನೀವು ಮಾಡಿದ ಅಡುಗೆಯಲ್ಲಿ ಕೆಲವೊಮ್ಮೆ ಸುಟ್ಟ ವಾಸನೆ ಬರುತ್ತಿರುತ್ತದೆ. ಇದರಿಂದ ಅತಿಥಿಗೆ ಊಟ ಬಡಿಸಲು ನಿಮಗೆ ಮುಜುಗರವಾಗಬಹುದು. ಹಾಗಾಗಿ ಈ ಸುಟ್ಟ ವಾಸನೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.
ಕೆಲವೊಮ್ಮೆ ನೀವು ಕುಕ್ಕರ್ ನಲ್ಲಿ ಬೇಳೆಗಳನ್ನು ಬೇಯಿಸಿದಾಗ ಅದರಿಂದ ಸುಟ್ಟ ವಾಸನೆ ಬರುತ್ತದೆ. ಆಗ ನೀವು ಬೇಯಿಸಿದ ಬೇಳೆಗಳನ್ನು ಫ್ರಿಜ್ ನಲ್ಲಿಡಿ, ಒಂದು ಗಂಟೆಯ ಬಳಿಕ ಈ ಬೇಳೆಗೆ ಈರುಳ್ಳಿ, ಟೊಮೆಟೊ, ಉದ್ದಿನ ಬೇಳೆ ಮತ್ತು ತುಪ್ಪದಿಂದ
ಒಗ್ಗರಣೆ ನೀಡಿದರೆ ಸುಟ್ಟ ವಾಸನೆ ಬರುವುದಿಲ್ಲ.
ನೀವು ಚಿಕನ್ ಗ್ರೇವಿ ಮಾಡುವಾಗ ಕೋಳಿ ಮಾಂಸವನ್ನು ಬೇಯಿಸುವಾಗ ಸುಟ್ಟ ವಾಸನೆ ಬರುತ್ತಿದ್ದರೆ ಅದಕ್ಕೆ ಸ್ವಲ್ಪ ತೆಂಗಿನ ಹಾಲನ್ನು ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿ. ಆಗ ಮಾಂಸದಲ್ಲಿರುವ ಸುಟ್ಟ ವಾಸನೆ ನಿವಾರಣೆಯಾಗುತ್ತದೆ.
ಹಾಗೇ ತರಕಾರಿ ಗ್ರೇವಿ ತಯಾರಿಸುವಾಗ ತರಕಾರಿಗಳಲ್ಲಿ ಸುಟ್ಟ ವಾಸನೆ ಬರುತ್ತಿದ್ದರೆ ಅದನ್ನು ನಿವಾರಿಸಲು ತರಕಾರಿಗಳಿಗೆ ಸ್ವಲ್ಪ ಮಜ್ಜಿಗೆ ಅಥವಾ ಮೊಸರು ಮಿಕ್ಸ್ ಮಾಡಿ ಬೇಯಿಸಿದರೆ ಸುಟ್ಟ ವಾಸನೆ ಹೋಗುತ್ತದೆ.