ಆಹಾರ ಸೇವನೆ ಮಾಡುವಾಗ ಪೋಷಕಾಂಶಗಳ ಬಗ್ಗೆ ಅನೇಕರು ಆಲೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅಡುಗೆ ಮಾಡುವ ವಿಧಾನಗಳಿಂದ ಆಹಾರದಲ್ಲಿರುವ ಫೋಷಕಾಂಶ ನಷ್ಟವಾಗುತ್ತದೆ. ದೇಹಕ್ಕೆ ಪೋಷಕಾಂಶಗಳು ಅತ್ಯಗತ್ಯವಾಗಿದ್ದು ಕೆಲವೊಂದು ಟಿಪ್ಸ್ ಮೂಲಕ ಆಹಾರದ ಪೋಷಕಾಂಶಗಳು ದೇಹ ಸೇರುವಂತೆ ಮಾಡಬಹುದು.
ಯಾವಾಗ್ಲೂ ತರಕಾರಿಯನ್ನು ಬೇಯಿಸಿದ ನಂತ್ರ ತೊಳೆಯಬೇಡಿ. ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತ್ರ ಬೇಯಿಸಿ.
ಕೆಲವೊಂದು ತರಕಾರಿಗಳ ಸಿಪ್ಪೆ ತೆಗೆದು ಬಳಸಬೇಕಾಗುತ್ತದೆ. ಸಿಪ್ಪೆ ತೆಗೆಯುವಾಗ ಗಮನವಿರಲಿ. ಸಿಪ್ಪೆ ಜೊತೆ ಅನೇಕರು ತರಕಾರಿಯನ್ನೂ ಕತ್ತರಿಸಿ ಎಸೆಯುತ್ತಾರೆ. ಹಾಗಾಗದಂತೆ ನೋಡಿಕೊಳ್ಳಿ.
ಅಡುಗೆ ಮಾಡುವ ಮೊದಲು ತರಕಾರಿಯನ್ನು ನೀರಿನಲ್ಲಿ ತುಂಬಾ ಸಮಯ ನೆನೆಸಿಡಬೇಡಿ. ನೀರಿನ ಅಂಶವನ್ನು ತರಕಾರಿ ಹೆಚ್ಚಾಗಿ ಹೀರಿಕೊಳ್ಳುವುದ್ರಿಂದ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಅಡುಗೆ ಮಾಡುವ ಮೊದಲು ತರಕಾರಿಯನ್ನು ಕತ್ತರಿಸಿ. ಮೊದಲೇ ತರಕಾರಿ ಕತ್ತರಿಸಿ ತೆರೆದ ಸ್ಥಳದಲ್ಲಿ ಇಡಬೇಡಿ.