ಪ್ರಪಂಚದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಆಲ್ಪೈನ್ ರಕ್ಷಣಾ ಕಾರ್ಯಕರ್ತರ ಗುಂಪು ಸಂತೋಷಪಡಿಸಿದೆ.
ಸಾಂತಾ ಕ್ಲಾಸ್‌ನಂತೆ ವೇಷ ಧರಿಸಿದ ಕಾರ್ಯಕರ್ತರು ಮಕ್ಕಳ ವಾರ್ಡ್ ನಲ್ಲಿ ಕೆಲವು ಮೋಜು, ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ಆಸ್ಪತ್ರೆಯ ಗೋಡೆಯನ್ನೇರುವ ಮೂಲಕ ಹುಬ್ಬೇರಿಸಿದ್ದಾರೆ. ಮಕ್ಕಳು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ಸಂತೋಷ ಪಡಿಸಿದ್ದಾರೆ. ಇಟಲಿಯ ಪಾಲಿಕ್ಲಿನಿಕೊ ಉಂಬರ್ಟೊ ಆಸ್ಪತ್ರೆಯಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ರಕ್ಷಣಾ ಕಾರ್ಯಕರ್ತರು ತಮ್ಮ ಕೌಶಲ್ಯಗಳನ್ನು ಬಳಸಿ ಮಕ್ಕಳನ್ನು ಬೆರಗುಗೊಳಿಸಿದ್ದಾರೆ. ಮಕ್ಕಳನ್ನು ಹುರಿದುಂಬಿಸುವ ಸಲುವಾಗಿ ಆಸ್ಪತ್ರೆಯ ಕಿಟಕಿಯಿಂದ ಹಾರಿದ್ದು, ಸಾಹಸಗಳನ್ನು ಪ್ರದರ್ಶಿಸಿದ್ದಾರೆ. ನಂತರ ಆಸ್ಪತ್ರೆಯೊಳಗೆ ತೆರಳಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳಿಗೆ ಉಡುಗೊರೆಗಳನ್ನು ನೀಡಿದ್ದಾರೆ.
ಉದಾರ ಸ್ವಯಂಸೇವಕರು ಮಕ್ಕಳಿಗಾಗಿ ಕ್ರಿಸ್ಮಸ್ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದು, ಎಲ್ಲರ ಮೊಗದಲ್ಲೂ ಸಂತೋಷ ತರಿಸಿದೆ. ಈ ಹಬ್ಬದ ಋತುವಿನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಕ್ರಿಸ್ಮಸ್ ಅನ್ನು ಉತ್ತಮಗೊಳಿಸಿದೆ ಎಂದರೆ ತಪ್ಪಿಲ್ಲ.