ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ನಡೆದ ಎರಡನೇ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 280ರನ್ ಗಳ ಗುರಿ ನೀಡಿದೆ ಆಸ್ಟ್ರೇಲಿಯಾ. ಇಂದು ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ 16 ರನ್ ಗಳಿಸಿ ಔಟಾದರೆ ಟ್ರಾವಿಸ್ ಹೆಡ್ 19ರನ್ ಗಳಿಸಿದ್ದು, ಕ್ರಿಸ್ ವೋಕ್ಸ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಸ್ಟೀವನ್ ಸ್ಮಿತ್ ಹಾಗೂ ಲಾಬುಶ್ಚಂಗೆ ಉತ್ತಮ ಜೊತೆ ಆಟವಾಡಿದರು. ಸ್ಟೀವನ್ ಸ್ಮಿತ್ (94) ಲಾಬುಶ್ಚಂಗೆ 58 ರನ್ ಹಾಗೂ ಮಿಚಲ್ ಮಾರ್ಷ್ ಅವರ ಅರ್ಧಶತಕದ ಸಹಾಯದಿಂದ 280 ರನ್ ಗಳ ಮೊತ್ತ ದಾಖಲಿಸಿದೆ.
ಆಸ್ಟ್ರೇಲಿಯಾ ತಂಡ ಈ ಪಂದ್ಯವನ್ನು ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಇಂಗ್ಲೆಂಡ್ ಗೆಲ್ಲಲೇ ಬೇಕಾದ ಅನಿವಾರ್ಯವಿದೆ