ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಅಪರೂಪದ ಬಿಳಿ ಬಣ್ಣದ ಕಾಂಗರೂ ಕಾಣಿಸಿಕೊಂಡಿದೆ. ಈ ಅಪರೂಪದ ಜೀವಿಯನ್ನು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ವೀಕ್ಷಿಸಿದ್ದು, ಸ್ವತಃ ಅವರಿಗೆ ನಂಬಲು ಸಾಧ್ಯವಾಗಲಿಲ್ಲ.
ನೊಗೊ ಸ್ಟೇಷನ್ ನಿವಾಸಿ ಸಾರಾ ಕಿನ್ನನ್ ಅವರು ಬಿಳಿ ಕಾಂಗರೂವನ್ನು ನೋಡಿದ್ದು, ಕೂಡಲೇ ಅಪರೂಪದ ಪ್ರಾಣಿಯ ಕೆಲವು ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. ಬಿಳಿ ಕಾಂಗರೂಗಳು ಬಹಳ ಅಪರೂಪದ ಜೀವಿಯಾಗಿದ್ದು, ಪ್ರತಿ 50,000 ರಿಂದ 100,000 ಪೈಕಿ ಒಮ್ಮೆ ಮಾತ್ರ ಕಾಣಸಿಗುತ್ತವೆ.
ಬಿಳಿ ಕಾಂಗರೂ ನೋಡಲು ಬಹಳ ಅದ್ಭುತವಾಗಿತ್ತು. ಬಿಳಿ ಬಣ್ಣದ ಹಾಳೆ ಎಷ್ಟು ಬೆಳ್ಳಗಿರುತ್ತೋ ಅಷ್ಟೇ ಬೆಳಗಿತ್ತು. ಅದನ್ನು ನೋಡಿದ್ದು ನಿಜಕ್ಕೂ ತನ್ನ ಅದೃಷ್ಟ ಎಂದು ಮಹಿಳೆ ತಿಳಿಸಿದ್ದಾರೆ.
ಔಟ್‌ಬ್ಯಾಕ್ ಪಯೋನಿಯರ್ಸ್ ಎಂಬ ಫೇಸ್‌ಬುಕ್ ಪುಟವು ಫೋಟೋಗಳನ್ನು ಹಂಚಿಕೊಂಡಿದೆ. ನೀವು ಎಂದಾದರೂ ಅಲ್ಬಿನೋ ಕಾಂಗರೂವನ್ನು ಕಂಡಿದ್ದೀರಾ? ಸಾರಾ ಕಿನ್ನನ್ ನೊಗೊ ಈ ಅಪರೂಪದ ಮತ್ತು ಸುಂದರವಾದ ಜೀವಿಯನ್ನು ಕಂಡಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ಅಂದಹಾಗೆ, ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂನ ಕ್ಯುರೇಟರ್ ಪಾಲ್ ಆಲಿವರ್, ಲಾಂಗ್‌ರೀಚ್‌ನಲ್ಲಿ ಗುರುತಿಸಲಾದ ಜೀವಿಯನ್ನು ವಾಸ್ತವವಾಗಿ ಲ್ಯೂಸಿಸ್ಟಿಕ್ ಕಾಂಗರೂ ಎಂದು ಹೇಳಲಾಗುತ್ತದೆ. ಇದು ಅಲ್ಬಿನೋ ಕಾಂಗರೂ ಅಲ್ಲ ಎಂದು ತಿಳಿಸಿದ್ದಾರೆ.