ಭಾರತದ ಎರಡು ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸುತ್ತಿಗೆ ಬಂದು ನಿಂತಿವೆ. ಮರಕ್ಕರ್ ಹಾಗೂ ಜೈ ಭೀಮ್ ಚಿತ್ರಗಳು ಈ ಸಾಲಿಗೆ ಬಂದು ನಿಂತಿವೆ.
2021 ರಲ್ಲಿ ತೆರೆ ಕಂಡಿದ್ದ ಮೋಹನ್ ಲಾಲ್ ಅಭಿನಯದ ಮರಕ್ಕರ್ ಚಿತ್ರ ಸಾಕಷ್ಟು ಜನ ಮನ್ನಣೆ ಗಳಿಸಿತ್ತು. ಇದರೊಂದಿಗೆ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಕೂಡ ಈ ಸಾಲಿಗೆ ಬಂದು ನಿಂತಿದೆ.
ದೇಶದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಈ ಚಿತ್ರಗಳು ಇಂದು ದೇಶಕ್ಕೆ ಕೀರ್ತಿ ತರುವ ಸನಿಹದಲ್ಲಿವೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆಂಡ್ ಸೈನ್ಸ್ ಈ ಬಾರಿಯ ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿರುವ ಚಿತ್ರಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಒಟ್ಟು 276 ಸಿನಿಮಾಗಳ ಹೆಸರುಗಳಿವೆ. ಈ ಎರಡು ಭಾರತೀಯ ಚಿತ್ರಗಳು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮರಕ್ಕರ್ ಚಿತ್ರವು ಮಲಯಾಳಂ ಭಾಷೆಯಲ್ಲಿದ್ದರೆ, ಜೈ ಭೀಮ್ ತಮಿಳು ಭಾಷೆಯಲ್ಲಿದೆ. ಮಾರ್ಚ್ 27ರಂದು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಈ ಎರಡೂ ಚಿತ್ರಗಳು ಇರುವುದರಿಂದಾಗಿ ಭಾರತೀಯ ಚಿತ್ರರಂಗ ಸಂತಸ ವ್ಯಕ್ತಪಡಿಸುತ್ತಿದೆ. ಅಲ್ಲದೇ, ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.