ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶಿವನ ಭಕ್ತರು ಶಿವನ ಪೂಜೆಗೆ ತಯಾರಿ ನಡೆಸಿದ್ದಾರೆ.ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಾನ್ಯತೆಯಿದೆ. ಉಳಿದ ದಿನಗಳಿಗಿಂತ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದ್ರೆ ಈಶ್ವರ ಬೇಗ ಒಲಿಯುತ್ತಾನೆಂಬ ನಂಬಿಕೆಯಿದೆ.ಶಿವನ ಕೃಪೆಗೆ ಗುರಿಯಾಗಲು ಭಕ್ತರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಜೊತೆ ಅಭಿಷೇಕ ಮಾಡಿದ್ರೆ ಶಿವ ಒಲಿದೇ ಒಲಿಯುತ್ತಾನೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಗಲಾಟೆ ನಡೆಯುತ್ತಿದ್ದರೆ ಶ್ರಾವಣ ಮಾಸದಲ್ಲಿ ಶಿವನಿಗೆ ಹಾಲಿನ ಅಭಿಷೇಕ ಮಾಡಿ. ಇದ್ರಿಂದ ಗಲಾಟೆ ಕಡಿಮೆಯಾಗುತ್ತದೆ. ಜೊತೆಗೆ ಮಂದಬುದ್ದಿ ಕಡಿಮೆಯಾಗುತ್ತದೆ.
ಶುದ್ಧ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ರೆ ಅನೇಕ ಆಸೆಗಳು ಈಡೇರುತ್ತವೆ. ಪ್ರತಿ ದಿನ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಿದ್ರೆ ಮನಸ್ಸು ಶಾಂತವಾಗುತ್ತದೆ. ಇದ್ರಿಂದ ಶಿವ ಖುಷಿಯಾಗ್ತಾನೆ.
ಮನೆಯಲ್ಲಿ ಅನಾರೋಗ್ಯ ಕಾಡುತ್ತಿದ್ದರೆ ಶುದ್ಧ ತುಪ್ಪವನ್ನು ಭಗವಂತನಿಗೆ ಅರ್ಪಿಸಬೇಕು. ಶುದ್ಧ ಹಸುವಿನ ತುಪ್ಪದ ಅಭಿಷೇಕ ಮಾಡಬೇಕು. ತುಪ್ಪದ ಅಭಿಷೇಕ ಮಾಡಿದ್ರೆ ಶಿವ ಪ್ರಸನ್ನನಾಗ್ತಾನೆ. ರೋಗ ಗುಣವಾಗುತ್ತದೆ ಎಂದು ನಂಬಲಾಗಿದೆ.