ಮುಂಬೈ : ಮದ್ಯ ತರಲಿಲ್ಲ ಎಂಬ ಕಾರಣಕ್ಕೆ ಮಗ ತಾಯಿಯನ್ನೇ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಸುತ್ತಿಗೆಯಿಂದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 52 ವರ್ಷದ ತಾಯಿ ಲೂರ್ತ್ ಮೇರಿ ಮುರ್ಗೇಶನ್ ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮುಂಬೈನ ಚೆಂಬೂರ್ ನ ವಶಿನಕಾ ಪ್ರದೇಶದಲ್ಲಿ ನಡೆದಿದೆ.
ಹೊರಗಡೆ ಹೋಗಿದ್ದ ತಾಯಿಗೆ ಮಗ ಪ್ರವೀಣ ಮದ್ಯ ತರುವಂತೆ ಹೇಳಿದ್ದ. ಆದರೆ, ತಾಯಿ ತಂದಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಮಗ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಸಿಟ್ಟಾದ ತಾಯಿ ಮಗನನ್ನೇ ಕೊಲೆ ಮಾಡಿದ್ದಾಳೆ ಎಂದು ಆರ್‌ಸಿಎಫ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಸಾಧಾರಣ ಧೈರ್ಯ ಹೊಂದಿದ್ದ CDS ಬಿಪಿನ್ ರಾವತ್ ನಿಧನದಿಂದ ತುಂಬಲಾರದ ನಷ್ಟ
ಮಗನ ಕೊಲೆಯಾದ ನಂತರ ತಾಯಿ, ಮಗ ಕಾಣೆಯಾಗಿದ್ದಾನೆ ಎಂದು ತನ್ನ ಪತಿಗೆ ಹೇಳಿದ್ದಾಳೆ. ಇದನ್ನು ನಂಬದ ಪತಿ ಪ್ಲಾಟ್ ಗೆ ಬಂದು ನೋಡಿದಾಗ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡಿದೆ. ಕೂಡಲೇ ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ತಾಯಿಯನ್ನು ಬಂಧಿಸಿದ್ದಾರೆ.