![](https://kannadadunia.com/wp-content/uploads/2022/11/11.jpg)
ಬಾಲಿವುಡ್ ನಟಿ ಬಿಪಾಶಾ ಬಸು ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳ ಆಗಮನದಿಂದ ಈ ತಾರಾ ಜೋಡಿ ಫುಲ್ ಖುಷಿಯಾಗಿದ್ದಾರೆ. ಮದುವೆಯಾಗಿ 6 ವರ್ಷಗಳ ಬಳಿಕ ಬಿಪಾಶಾ ಹಾಗೂ ಕರಣ್ ಮೊದಲ ಮಗುವನ್ನು ಪಡೆದಿದ್ದಾರೆ.
2016ರಲ್ಲಿ ಇವರ ವಿವಾಹ ನೆರವೇರಿತ್ತು. ಗುಡ್ ನ್ಯೂಸ್ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ತಾನು ಗರ್ಭಿಣಿ ಅನ್ನೋ ಸಿಹಿ ಸುದ್ದಿಯನ್ನು ಬಿಪಾಶಾ ಆಗಸ್ಟ್ನಲ್ಲಿ ಹಂಚಿಕೊಂಡಿದ್ದರು. ಅದಾದ್ಮೇಲೆ ಹಲವು ಬಾರಿ ಬೇಬಿ ಬಂಪ್ ಜೊತೆಗೆ ಬಿಪಾಶಾ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ.
ಬಿಪಾಶಾ ಹಾಗೂ ಕರಣ್ ಸುಂದರವಾದ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಬಿಪಾಶಾ ಸಖತ್ ಬೋಲ್ಡ್ ಲುಕ್ನಲ್ಲೇ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಕೆಲವು ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತಮಗೆ ಮಗಳು ಬೇಕು ಎಂಬ ಆಸೆಯನ್ನು ಸಂದರ್ಶನವೊಂದರಲ್ಲಿ ಬಿಪಾಶಾ ಹೇಳಿಕೊಂಡಿದ್ದರು. ಅದೇ ರೀತಿ ಮಗಳ ಆಗಮನವಾಗಿದ್ದು, ಕರಣ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.