alex Certify ಆಲಸ್ಯವನ್ನು ಓಡಿಸಿ ಬೆಳಗ್ಗೆ ಬೇಗನೆ ಏಳಲು ಸುಲಭದ ಟ್ರಿಕ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಸ್ಯವನ್ನು ಓಡಿಸಿ ಬೆಳಗ್ಗೆ ಬೇಗನೆ ಏಳಲು ಸುಲಭದ ಟ್ರಿಕ್ಸ್‌…!

ಈಗ ಸಾಮಾನ್ಯವಾಗಿ ಎಲ್ಲರದ್ದೂ ಬ್ಯುಸಿಯಾದ ಜೀವನಶೈಲಿ. ಬೆಳಗ್ಗೆ ಬೇಗನೆ ಏಳದೇ ಇದ್ದರೆ ಎಲ್ಲಾ ಕೆಲಸಗಳೂ ಅಪೂರ್ಣವಾಗುತ್ತವೆ. ಆದರೆ ಬೆಳಗ್ಗೆ ಬೇಗ ಏಳುವುದು ಅತ್ಯಂತ ಪ್ರಯಾಸದ ಕೆಲಸ. ಬಿಟ್ಟೆನೆಂದರೂ ನಿದ್ದೆ ನಮ್ಮನ್ನು ಬಿಡುವುದೇ ಇಲ್ಲ. ಬೆಳಗ್ಗೆ ಬೇಗನೆ ಎದ್ದೇಳಲು ಆಲಸ್ಯವಾಗುತ್ತಿದ್ದರೆ ಕೆಲವೊಂದು ಸುಲಭದ ಟ್ರಿಕ್ಸ್‌ಗಳನ್ನು ಅನುಸರಿಸಿ. ಆಗ ನಿದ್ದೆಯನ್ನು ಹೊಡೆದೋಡಿಸಿ ಫ್ರೆಶ್‌ ಆಗಬಹುದು.

ಅಲಾರಾಂ ಕೈಗೆ ಸಿಗದಂತೆ ದೂರವಿಡಿ

ಸೆಲ್‌ಫೋನ್‌ಗಳ ಟ್ರೆಂಡ್‌ಗಿಂತ ಮೊದಲು ನಾವು ಅಲಾರಾಂ ಗಡಿಯಾರವನ್ನು ಹೆಚ್ಚು ಬಳಸುತ್ತಿದ್ದೆವು. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದ ನಂತರ ಮೊಬೈಲ್‌ನಲ್ಲಿಯೇ ಅಲಾರ್ಮ್ ಸೌಲಭ್ಯ ಬಂದಿದೆ. ಸಮಸ್ಯೆ ಏನೆಂದರೆ ನಾವು ಫೋನ್‌ನಲ್ಲಿ ಸ್ನೂಜ್ ಬಟನ್ ಅನ್ನು ಹೆಚ್ಚು ಬಳಸುತ್ತೇವೆ. ಇದರಿಂದಾಗಿ ಅಲಾರಾಂ ಹೊಡೆದುಕೊಂಡರೂ ಅದನ್ನು ಸ್ನೂಝ್ ಮಾಡಿ ಮತ್ತೆ ಮಲಗುತ್ತೇವೆ. ಅದಕ್ಕಾಗಿಯೇ ಮೊಬೈಲ್ ಫೋನ್‌ನಲ್ಲಿ ಅಲಾರಾಂ ಅನ್ನು ಹೊಂದಿಸಿದ ನಂತರ ಅದನ್ನು ಕೈಗೆ ಸಿಗದಷ್ಟು ದೂರವಿಡಿ. ಹೀಗೆ ಮಾಡುವುದರಿಂದ ಅಲಾರಾಂ ಆಫ್ ಮಾಡಲು ನೀವು ಹಾಸಿಗೆಯಿಂದ ಎದ್ದೇಳಬೇಕು, ಆಗ ಬೇಗನೆ ಏಳುವುದು ಸುಲಭವಾಗುತ್ತದೆ.

ಉಗುರು ಬೆಚ್ಚನೆಯ ನೀರು ಕುಡಿಯಿರಿ

ಭಾರತದಲ್ಲಿ ಅನೇಕರು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಇದನ್ನು ಬೆಡ್ ಟೀ ಎಂದೂ ಕರೆಯುತ್ತಾರೆ. ಆದರೆ ಹಾಗೆ ಮಾಡುವುದರಿಂದ ಅಸಿಡಿಟಿ ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಚಹಾವನ್ನು ಕುಡಿಯುವ ಬದಲು ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು. ಇದು ನಮ್ಮ ದೇಹವನ್ನು ತಕ್ಷಣವೇ ಸಕ್ರಿಯಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನೂ ನಿವಾರಿಸುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಬಹುದು. ಹೀಗೆ ಮಾಡುವುದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ.

ವಾಕ್ ಹೋಗಿ

ಮೇಲಿನ ಕ್ರಮಗಳ ಹೊರತಾಗಿಯೂ ನಿದ್ದೆಯ ಮಂಪರು ನಿಮ್ಮಲ್ಲಿದ್ದರೆ ಬೆಳಗಿನ ನಡಿಗೆಗೆ ಹೋಗುವುದು ಅವಶ್ಯಕ. 20 ರಿಂದ 30 ನಿಮಿಷಗಳ ಕಾಲ ವಾಕ್‌ ಮಾಡಿ. ಇದರಿಂದ ನಿಮ್ಮ ದೇಹವು ಸಕ್ರಿಯವಾಗಿರುತ್ತದೆ. ನಿಮಗೆ ಮತ್ತೆ ಮಲಗಬೇಕು ಎನಿಸುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...