ಸಾಮಾನ್ಯವಾಗಿ ಬಾದಾಮಿ ಎಂದ್ರೆ ಎಲ್ಲರಿಗೂ ಇಷ್ಟ. ಒಣಗಿದ ಬಾದಾಮಿಯನ್ನು ಇಷ್ಟಪಡುವ ಜನರು ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನಲು ಮನಸ್ಸು ಮಾಡುವುದಿಲ್ಲ. ಆದ್ರೆ ಇನ್ನು ಮುಂದೆ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ. ಒಣ ಬಾದಾಮಿಗಿಂತ ಹಸಿ ಬಾದಾಮಿ ತಿನ್ನುವುದನ್ನು ರೂಢಿಸಿಕೊಳ್ಳಿ.
ಆರೋಗ್ಯ ವೃದ್ಧಿಗೆ ಬಾದಾಮಿ ಒಳ್ಳೆಯದು. ಬಾದಾಮಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಇ, ಸತು, ಕ್ಯಾಲ್ಸಿಯಂ ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳು ಮತ್ತು ಕ್ಯಾಲ್ಸಿಯಂ ಅಂಶಗಳು ಬಾದಾಮಿಯಲ್ಲಿ ಹೇರಳವಾಗಿದೆ. ಈ ಪೋಷಕಾಂಶಗಳು ನಮ್ಮ ದೇಹ ಸೇರಬೇಕಾದ್ರೆ ಒಣ ಬಾದಾಮಿ ಸೇವನೆ ಮಾಡುವುದಕ್ಕಿಂತ ಹಸಿ ಬಾದಾಮಿ ಸೇವನೆ ಮಾಡಬೇಕಾಗುತ್ತದೆ. ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವನೆ ಮಾಡಬೇಕು.
ಬಾದಾಮಿಯ ಸಿಪ್ಪೆಯಲ್ಲಿ ಟ್ಯಾನಿಕ್ ಇರುತ್ತದೆ. ನೀರಿನಲ್ಲಿ ನೆನೆಸಿಡುವುದರಿಂದ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಸಿಪ್ಪೆ ತೆಗೆದು ಬಾದಾಮಿ ಸೇವನೆ ಮಾಡುವುದರಿಂದ ಅದರಲ್ಲಿರುವ ಸಂಪೂರ್ಣ ಪೋಷಕಾಂಶ ದೇಹವನ್ನು ಸೇರುತ್ತದೆ. ಜೊತೆಗೆ ಈ ಬಾದಾಮಿ ಜೀರ್ಣಕ್ರಿಯೆಗೆ ಕೂಡ ಸಹಕಾರಿ. ತೂಕ ಇಳಿಸಿಕೊಳ್ಳಲು, ಕ್ಯಾನ್ಸರ್ ನಿಯಂತ್ರಣಕ್ಕೆ ಹಾಗೂ ಜನನ ದೋಷಗಳ ವಿರುದ್ಧ ಬಾದಾಮಿ ಹೋರಾಡುತ್ತದೆ. ರಕ್ತದೊತ್ತಡ ನಿಯಂತ್ರಣ, ಮಧುಮೇಹ, ನೆನಪಿನ ಶಕ್ತಿ ಹೆಚ್ಚಳ, ಕೊಬ್ಬು ನಿಯಂತ್ರಣ ಸೇರಿದಂತೆ ಅನೇಕ ಔಷಧಿ ಗುಣಗಳು ಹಸಿ ಬಾದಾಮಿಯಲ್ಲಿದೆ.