ಮನುಷ್ಯನ ಜೀವನದಲ್ಲಿ ಕನ್ನಡಿ ಮಹತ್ವದ ಸ್ಥಾನ ಪಡೆದಿದೆ. ತನ್ನನ್ನು ನೋಡಿಕೊಳ್ಳಲು ಮನುಷ್ಯನಿಗೆ ಇರುವ ಸಾಧನ ಕನ್ನಡಿ. ವಾಸ್ತು ಶಾಸ್ತ್ರದಲ್ಲಿಯೂ ಈ ಕನ್ನಡಿಗೆ ಮಹತ್ವದ ಸ್ಥಾನವಿದೆ. ವಾಸ್ತು ದೋಷ ದೂರ ಮಾಡಲು ವಾಸ್ತುತಜ್ಞರು ಕನ್ನಡಿಯನ್ನು ಬಳಸ್ತಾರೆ. ಕೆಲವೊಂದು ಸ್ಥಳಗಳಲ್ಲಿ ಕನ್ನಡಿ ಇರಿಸುವುದರಿಂದ ಆರ್ಥಿಕ ಹಾಗೂ ಮಾನಸಿಕ ನಷ್ಟವುಂಟಾಗುತ್ತದೆ.
ಕನ್ನಡಿ ಖರೀದಿ ಮಾಡುವಾಗ ಕನ್ನಡಿ ಹೇಗಿದೆ ಎಂಬುದನ್ನು ನೋಡಿಕೊಳ್ಳಿ. ಕನ್ನಡಿ ಶುದ್ಧವಾಗಿ, ಸ್ವಚ್ಛವಾಗಿ, ನೀವಿರುವಂತೆಯೇ ಕಾಣುವ ಕನ್ನಡಿಯನ್ನು ಖರೀದಿ ಮಾಡಿ. ಸ್ಪಷ್ಟವಾಗಿ ಕಾಣದ ಕನ್ನಡಿ ನಿಮ್ಮ ಮನೆಯಲ್ಲಿದ್ದರೆ ಕೆಟ್ಟ ಪರಿಣಾಮಗಳುಂಟಾಗುತ್ತವೆ. ರೋಗ ಬಾಧಿಸುತ್ತದೆ.
ಮನೆಯ ಉತ್ತರ ಹಾಗೂ ಪೂರ್ವದ ಗೋಡೆಗೆ ಕನ್ನಡಿಯನ್ನು ನೇತು ಹಾಕುವುದರಿಂದ ಲಾಭವುಂಟಾಗುತ್ತದೆ. ವ್ಯಾಪಾರದಲ್ಲಿ ನಷ್ಟವುಂಟಾಗ್ತಾ ಇರುವವರು ಉತ್ತರ ಅಥವಾ ಪೂರ್ವಕ್ಕೆ ಕನ್ನಡಿ ತೂಗಿ ಹಾಕಿದ್ರೆ ಲಾಭ ಕಾಣುತ್ತಾರೆ.
ದೊಡ್ಡದಾದ ಹಾಗೂ ಸ್ಪಷ್ಟ ಕನ್ನಡಿಯಿಂದ ಸಾಕಷ್ಟು ಲಾಭವಿದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಬಾಗಿಲಿನ ಹಿಂದೆ ಕನ್ನಡಿ ಇಡುವುದು ಶುಭಕರ. ಆದ್ರೆ ಮರೆತೂ ಮುಖ್ಯ ದ್ವಾರದ ಬಾಗಿಲ ಹಿಂದೆ ಕನ್ನಡಿ ಅಳವಡಿಸಬೇಡಿ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಮುಖ್ಯದ್ವಾರದ ಮುಂದೆ ಕನ್ನಡಿ ಅಳವಡಿಸುವುದರಿಂದ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.
ಡೈನಿಂಗ್ ಟೇಬಲ್ ಮುಂದೆ ಕನ್ನಡಿ ಅಳವಡಿಸುವುದರಿಂದ ಶುಭ ಫಲಗಳನ್ನು ಕಾಣಬಹುದಾಗಿದೆ. ಡೈನಿಂಗ್ ಟೇಬಲ್ ಸಂಪೂರ್ಣ ಕಾಣುವಂತೆ ಕನ್ನಡಿ ಅಳವಡಿಸಿದ್ರೆ ಮನೆಯಲ್ಲಿ ಏಳಿಗೆಯಾಗುತ್ತೆ.
ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ತೂಗಿ ಹಾಕಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿ ಅಳವಡಿಸುವುದರಿಂದ ದಾಂಪತ್ಯದಲ್ಲಿ ಬಿರುಕುಂಟಾಗುತ್ತದೆ.