ಎಲ್ಲರ ಬಳಿಯೂ ಹಣವಿರುತ್ತದೆ. ಅದನ್ನು ಸುರಕ್ಷಿತವಾಗಿಡಲು ಎಲ್ಲರೂ ಬಯಸ್ತಾರೆ. ಹಣ ಪ್ರತಿ ದಿನ ಹೆಚ್ಚಾಗ್ಲಿ, ಆರ್ಥಿಕ ವೃದ್ಧಿಯಾಗ್ಲಿ ಎಂದು ಎಲ್ಲರೂ ಬಯಸ್ತಾರೆ.
ಮನೆಯಲ್ಲಿ ನೀವು ಇಡುವ ಹಣದ ಸ್ಥಳ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ. ಹಣವನ್ನು ಸರಿಯಾದ ದಿಕ್ಕಿನಲ್ಲಿ ಇಡದೆ ಹೋದ್ರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.
ಪೂರ್ವ ದಿಕ್ಕಿನಲ್ಲಿ ಹಣವನ್ನು ಇಡಬೇಕು. ಇದು ಬಹಳ ಶುಭಕರ. ಹಣದ ವೃದ್ಧಿಯಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ಹಣ, ಆಸ್ತಿಗಳನ್ನು ಇರಿಸಿದ್ರೆ ಮನೆಯ ಮುಖ್ಯಸ್ಥ ಕಷ್ಟಪಟ್ಟು ಹಣ ಸಂಪಾದನೆ ಮಾಡಬೇಕಾಗುತ್ತದೆ.
ಹಣ, ಬಂಗಾರವನ್ನಿಡುವ ಕಪಾಟನ್ನು ದಕ್ಷಿಣ ದಿಕ್ಕಿನಲ್ಲಿಡಬೇಕು. ಕಪಾಟಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತಿರಬೇಕು. ಕಪಾಟನ್ನು ಹೀಗೆ ಇಟ್ಟರೆ ಸದಾ ಧನ, ಸಂಪತ್ತಿನ ವೃದ್ಧಿಯಾಗುತ್ತದೆ.
ದಕ್ಷಿಣ ದಿಕ್ಕಿನಲ್ಲಿ ಹಣವನ್ನಿಟ್ಟರೆ ಆರ್ಥಿಕ ನಷ್ಟವೇನೂ ಆಗುವುದಿಲ್ಲ. ಹಾಗೆ ಆರ್ಥಿಕ ವೃದ್ಧಿಯೂ ಆಗುವುದಿಲ್ಲ. ಹಾಗೆ ಮೆಟ್ಟಿಲ ಕೆಳಗೆ ಹಣವಿಟ್ಟ ಕಪಾಟನ್ನು ಇಡಬಾರದು. ಟಾಯ್ಲೆಟ್ ಮುಂದೆಯೂ ಕಪಾಟನ್ನು ಇಡಬಾರದು.