ವಾಸ್ತು ಕೇವಲ ಮನೆಯ ದಿಕ್ಕು ಅಥವಾ ಮನೆಯಲ್ಲಿರುವ ಕೋಣೆ, ಅದರ ದಿಕ್ಕನ್ನು ಅವಲಂಭಿಸಿಲ್ಲ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ವಾಸ್ತುವಿಗೆ ಸಂಬಂಧಿಸಿವೆ. ಮನೆಯಲ್ಲಿ ಆಗುವ ಸಣ್ಣಪುಟ್ಟ ಘಟನೆ ಅಥವಾ ನಿರ್ಲಕ್ಷ್ಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮನೆಯಲ್ಲಿ ಲಕ್ಷ್ಮಿ ಫೋಟೋ ಅಥವಾ ಮೂರ್ತಿಗಳು ಇದ್ದೇ ಇರುತ್ತವೆ. ಲಕ್ಷ್ಮಿ ಫೋಟೋ ಅಥವಾ ಮೂರ್ತಿಗಳನ್ನು ಎದುರು ಬದಿರಿನಲ್ಲಿ ಇಡಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಎಂದೂ ತಾಯಿ ಲಕ್ಷ್ಮಿ ನಿಮಗೆ ಒಲಿಯುವುದಿಲ್ಲ.
ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆಂದು ನಂಬಲಾಗಿದೆ. ಹಾಗಾಗಿ ಪೊರಕೆಯನ್ನು ಸದಾ ಯಾರ ಕಣ್ಣಿಗೂ ಬೀಳದಂತೆ ಇಡಬೇಕು. ಎರಡು ಪೊರಕೆಯನ್ನು ಒಟ್ಟಿಗೆ ಇಡಬಾರದು.
ಹರಿದ ಬಟ್ಟೆಯನ್ನು ಎಂದಿಗೂ ಧರಿಸಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಳೆ ಬಟ್ಟೆಗಳನ್ನು ಇಡಬಾರದು. ಬಡವರಿಗೆ ದಾನ ಮಾಡಬೇಕು.
ಮನೆಯಲ್ಲಿ ಎಂದೂ ತೆಗೆಯಲು ಬಾರದ ಕೀಯನ್ನು ಇಟ್ಟುಕೊಳ್ಳಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಎಂದೂ ಒಡೆದ ಪಾತ್ರೆಯಲ್ಲಿ ಆಹಾರ ಸೇವನೆ ಮಾಡಬಾರದು. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ.