ಹಳೆಯ ವಸ್ತುಗಳಿಗೆ ಈಗ್ಲೂ ಪ್ರಾಮುಖ್ಯತೆಯಿದೆ. ವಾಸ್ತು ಶಾಸ್ತ್ರದಲ್ಲೂ ಕೆಲ ವಸ್ತುಗಳನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಿರುವ ವಸ್ತುಗಳಲ್ಲಿ ಮಣ್ಣಿನ ಮಡಕೆ ಒಂದು. ಮಣ್ಣಿನ ಮಡಕೆಯಿಂದ ಅನೇಕ ಪ್ರಯೋಜನಗಳಿವೆ. ಹಣದ ಬಿಕ್ಕಟ್ಟನ್ನು ಇದು ಬಗೆಹರಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ, ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಇಡುವುದು ಮಂಗಳಕರ. ಮನೆಯಲ್ಲಿ ಸದಾ ಸಂಪತ್ತು, ಆಹಾರ ಇರಲು ಇದು ಕಾರಣವಾಗುತ್ತದೆ.
ಉತ್ತರ ದಿಕ್ಕನ್ನು ನೀರಿನ ದೇವತೆಯ ದಿಕ್ಕು ಎನ್ನಲಾಗುತ್ತದೆ. ಇದೇ ದಿಕ್ಕಿನಲ್ಲಿ ಮಣ್ಣಿನ ಮಡಿಕೆ ಇಡುವುದು ಉತ್ತಮ.
ಒತ್ತಡದಿಂದ ಬಳಲುತ್ತಿರುವ ಜನರು ಮಣ್ಣಿನ ಮಡಕೆಯಲ್ಲಿ ಗಿಡಗಳಿಗೆ ನೀರು ಹಾಕಬೇಕು. ಇದು ಕೆಲವು ದಿನಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ.
ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ, ಅದನ್ನು ನೀರಿನಲ್ಲಿ ಬಿಡಬೇಕು. ಹಣಕಾಸಿನ ಎಲ್ಲ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ.
ಅಲಂಕಾರಿಕ ಮಣ್ಣಿನ ಮಡಕೆಗಳನ್ನು ಕೂಡ ಮನೆಯಲ್ಲಿ ಇಡಬಹುದು. ಇದು ಸಂಸ್ಕೃತಿಯನ್ನು ಪ್ರತಿಬಿಂಭಿಸುವುದಲ್ಲದೆ ಮನೆಯವರ ಸಂಬಂಧವನ್ನು ಸುಧಾರಿಸುತ್ತದೆ.