ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಅದರದೇ ಆದ ಮಹತ್ವವಿದೆ. ದಿನ ಹಾಗೂ ರಾತ್ರಿಯನ್ನು ಬದಲಾಯಿಸುವ ಸಮಯ ಅದು. ಈ ಸಮಯದಲ್ಲಿ ಮನುಷ್ಯ ಮಲಗಿದ್ರೆ ಆತ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗೇ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಈ ಸಮಯದಲ್ಲಿ ಮನುಷ್ಯ, ಲಕ್ಷ್ಮಿಯನ್ನು ಪ್ರಸನ್ನಗೊಳಿಸಿದ್ರೆ ಆರ್ಥಿಕ ಸಮಸ್ಯೆ ದೂರವಾಗಲಿದೆ.
ಶಾಸ್ತ್ರಗಳಲ್ಲಿ ತುಳಸಿಯನ್ನು ಶುಭವೆಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ಶಾಸ್ತ್ರಬದ್ಧವಾಗಿ ತುಳಸಿಯ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳಂತೆ. ಆದ್ರೆ ಸೂರ್ಯಾಸ್ತದ ವೇಳೆ ತುಳಸಿಯ ಸ್ಪರ್ಶ ಮಾಡಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
ಸೂರ್ಯಾಸ್ತದ ವೇಳೆ ತುಳಸಿಯನ್ನು ಮುಟ್ಟಬಾರದು. ಜೊತೆಗೆ ಅದಕ್ಕೆ ನೀರನ್ನು ಹಾಕಬಾರದು. ತುಳಸಿ ಗಿಡದ ಕೆಳಗೆ ದೀಪವನ್ನು ಹಚ್ಚಬೇಕು. ತುಪ್ಪದ ದೀಪವಾದ್ರೆ ಒಳ್ಳೆಯದು. ಇಲ್ಲವಾದಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು.
ಸಾಮಾನ್ಯವಾಗಿ ಮನೆಯ ದೇವರಿಗೆ ದೀಪ ಬೆಳಗಿದ ನಂತ್ರ ತುಳಸಿ ಮಾತೆಗೆ ದೀಪ ಹಚ್ಚಲಾಗುತ್ತದೆ. ಆದ್ರೆ ಶಾಸ್ತ್ರಗಳ ಪ್ರಕಾರ ಹಾಗೆ ಮಾಡುವುದು ಒಳಿತಲ್ಲ. ಮೊದಲು ತುಳಸಿಗೆ ದೀಪ ಬೆಳಗಬೇಕು. ನಂತ್ರ ಮನೆಯೊಳಗೊಂದು ದೀಪ ಹಚ್ಚಬೇಕು. ಆ ನಂತ್ರ ದೇವರಿಗೆ ದೀಪ ಹಚ್ಚಬೇಕು. ಹೀಗೆ ಮಾಡಿದಲ್ಲಿ ಮನೆ ಹೊರಗಡೆಯಿಂದ ದೇವರು ಒಳಗೆ ಪ್ರವೇಶ ಮಾಡುತ್ತಾನೆ. ಜೊತೆಗೆ ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ.
ಸೂರ್ಯಸ್ತದ ವೇಳೆ ಆಹಾರ ಸೇವನೆ ಮಾಡಬಾರದು. ಇದು ಧ್ಯಾನ ಹಾಗೂ ಪೂಜೆಯ ಕಾಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ವೇಳೆ ದೇವಾನುದೇವತೆಗಳು ತಮ್ಮ ಕೆಲಸವನ್ನು ಬದಲಾಯಿಸುತ್ತವೆ. ಹಾಗಾಗಿ ಈ ವೇಳೆ ಆಹಾರ ಸೇವನೆ ಒಳ್ಳೆಯದಲ್ಲ.
ಸೂರ್ಯಾಸ್ತದ ವೇಳೆ ಪತಿ – ಪತ್ನಿ ಒಂದಾಗುವುದು ಒಳ್ಳೆಯದಲ್ಲ. ಈ ವೇಳೆ ಮಲಗುವುದೂ ಒಳ್ಳೆಯದಲ್ಲ. ಯಾವ ಮನೆಯಲ್ಲಿ ಸೂರ್ಯಾಸ್ತದ ವೇಳೆ ಪುರುಷ ಮಲಗ್ತಾನೋ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ಸೂರ್ಯಾಸ್ತದ ವೇಳೆ ಕರ್ಪೂರದ ಆರತಿ ಬೆಳಗಬೇಕು. ಮನೆಗೆಲ್ಲ ಕರ್ಪೂರದ ಆರತಿ ತೋರಿಸಿ ನಂತ್ರ ಅದನ್ನು ಮುಖ್ಯ ದ್ವಾರದ ಬಳಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ.