ಕುವೆಂಪು ವಿಶ್ವವಿದ್ಯಾಲಯದ ಈ ಬಾರಿಯ ಪದವಿ ಪರೀಕ್ಷೆಯ ಪತ್ರಿಕೋದ್ಯಮ ವಿಷಯದಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿಯೊಬ್ಬರು ಆರ್ಥಿಕ ಸಂಕಷ್ಟದ ಕಾರಣಕ್ಕೆ ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಅಮುದಾ ಕಡುಬಡತನದಲ್ಲೂ ಕಷ್ಟಪಟ್ಟು ಓದಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಆದರೆ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿರುವ ಅವರ ತಂದೆ – ತಾಯಿಗೆ ಮುಂದೆ ಓದಿಸುವ ಶಕ್ತಿ ಇಲ್ಲ.
ಹೀಗಾಗಿಯೇ ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಆಮುದಾ ಕೆಲಸಕ್ಕೆ ಸೇರಿಕೊಂಡಿದ್ದು, ಘಟಿಕೋತ್ಸವ ಸಂದರ್ಭದಲ್ಲಿ ಸ್ವರ್ಣ ಪದಕ ಹಾಗೂ ನಗದು ಬಹುಮಾನವನ್ನು ಪಡೆಯಲು ಅವರು ಕೆಲಸಕ್ಕೆ ರಜಾ ಹಾಕಿ ಬರಬೇಕಿದೆ.
ಅಮುದಾ ಅವರಿಗೆ ಹೆಚ್ಚಿನ ವ್ಯಾಸಂಗ ಮಾಡಲು ಮನಸ್ಸಿದ್ದರೂ ಬಡತನದ ಕಾರಣಕ್ಕೆ ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸಕ್ಕೆ ಯಾರಾದರೂ ನೆರವು ನೀಡಿದರೆ ಪೋಷಕರನ್ನು ಕೇಳಿ ತೀರ್ಮಾನಿಸುವುದಾಗಿ ಅಮುದಾ ಹೇಳಿದ್ದು, ಹೆಚ್ಚಿನ ಮಾಹಿತಿಗೆ 8296007966 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.