ಹಿಂದೂ ಧರ್ಮದ ಪ್ರಕಾರ ತಾಯಿ ಲಕ್ಷ್ಮಿಯನ್ನು ಧನ ದೇವತೆ ಎಂದು ಕರೆಯಲಾಗುತ್ತದೆ. ಸದಾ ಜೇಬು ತುಂಬಿರಲಿ, ಆರ್ಥಿಕ ವೃದ್ಧಿಯಾಗಲಿ ಎಂಬ ಕಾರಣಕ್ಕೆ ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಕಲ್ಪನೆ ಇಲ್ಲದೆ ಮಾಡುವ ಕೆಲವು ತಪ್ಪುಗಳು ಆರ್ಥಿಕ ವೃದ್ಧಿಗೆ ಅಡ್ಡಿಯುಂಟು ಮಾಡುತ್ತದೆ.
ಸಂಜೆಯಾಗ್ತಿದ್ದಂತೆ ಮುಖ್ಯ ಗೇಟ್ ಮುಂದೆ ಯಾವುದೇ ರೀತಿಯ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ದ್ವಾರದ ಮುಂದೆ ಕಸವಿದ್ದರೆ ತಕ್ಷಣ ತೆಗೆಯಿರಿ.
ಸಂಜೆಯಾಗ್ತಿದ್ದಂತೆ ಹಾಲು-ಮೊಸರು ಹಾಗೆ ಈರುಳ್ಳಿಯನ್ನು ಬೇರೆಯವರಿಗೆ ನೀಡಬೇಡಿ. ಇದು ಅಶುಭ.
ರಾತ್ರಿ ಊಟ ಮಾಡುವ ವೇಳೆ ಮರೆತೂ ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ. ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿ ಕೃಪೆ ಎಂದೂ ಪ್ರಾಪ್ತವಾಗುವುದಿಲ್ಲ.
ರಾತ್ರಿ ಅಡುಗೆ ಮನೆಯಲ್ಲಿ ಖಾಲಿ ಬಕೆಟ್ ಇಡಬೇಡಿ. ಖಾಲಿ ಬಕೆಟ್ ಇಡುವುದರಿಂದ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಬಕೆಟ್ ನಲ್ಲಿ ನೀರಿರುವಂತೆ ನೋಡಿಕೊಳ್ಳಿ.
ಮರೆತೂ ಸೂರ್ಯಾಸ್ತವಾದ ಮೇಲೆ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಬೇಡಿ.