ವ್ಯಾಪಾರ ಶುರು ಮಾಡುವಾಗ ಪ್ರತಿಯೊಬ್ಬರೂ ವ್ಯಾಪಾರ ಉತ್ತಮವಾಗಿ ನಡೆಯಲಿ ಎಂದೇ ಬಯಸ್ತಾರೆ. ಆದ್ರೆ ಅದೃಷ್ಟ ಕೈಕೊಟ್ಟಾಗ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ಬಣ್ಣ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.
ಆರ್ಥಿಕ ಮುಗ್ಗಟ್ಟು ಬೆಂಬಿಡದೆ ಕಾಡುತ್ತಿದ್ದರೆ ಮೊದಲು ಹಣವಿಡುವ ಕಪಾಟಿನ ಬಗ್ಗೆ ಗಮನ ನೀಡಿ. ಕಪಾಟಿನ ಮುಖ ಎಂದೂ ದಕ್ಷಿಣಕ್ಕೆ ಇರದಂತೆ ನೋಡಿಕೊಳ್ಳಿ. ದಕ್ಷಿಣ ದಿಕ್ಕಿಗೆ ಬಾಗಿಲು ತೆರೆಯುವ ಕಪಾಟಿನಲ್ಲಿ ಎಂದೂ ಹಣ ನಿಲ್ಲುವುದಿಲ್ಲ. ಹಾಗಾಗಿ ದಕ್ಷಿಣ ದಿಕ್ಕಿಗೆ ಕಪಾಟಿನ ಮುಖವಿದ್ದರೆ ಅದನ್ನು ತಕ್ಷಣ ಬದಲಾಣೆ ಮಾಡಿ.
ವಾಸ್ತುಶಾಸ್ತ್ರದ ಪ್ರಕಾರ ಬಣ್ಣ ಕೂಡ ನಮ್ಮ ಅದೃಷ್ಟವನ್ನು ಬದಲಾವಣೆ ಮಾಡುತ್ತದೆಯಂತೆ. ಮನೆಯ ಆಗ್ನೇಯ ದಿಕ್ಕಿನ ಗೋಡೆಗೆ ನೀಲಿ ಬಣ್ಣವನ್ನು ಮಾತ್ರ ಹಚ್ಚಬೇಡಿ. ಮನೆಯ ಆಗ್ನೇಯ ದಿಕ್ಕಿಗೆ ನೀಲಿ ಬಣ್ಣ ಹಚ್ಚಿದ್ರೆ ಆರ್ಥಿಕ ವೃದ್ಧಿಗೆ ಅಡಚಣೆಯುಂಟಾಗುತ್ತದೆ. ಒಂದು ವೇಳೆ ಕಪಾಟಿನ ಆಗ್ನೇಯ ದಿಕ್ಕಿನ ಗೋಡೆಗೆ ನೀಲಿ ಬಣ್ಣವಿದ್ದರೆ ಅದನ್ನು ತಕ್ಷಣ ಬದಲಿಸಿ. ಕಪಾಟು ಇಡುವ ಗೋಡೆಗೆ ಕೆನೆ ಬಣ್ಣ ಹಚ್ಚಿ. ಕ್ರೀಂ ಕಲರ್ ನಿಮ್ಮ ಅದೃಷ್ಟ ಬದಲಿಸುವ ಶಕ್ತಿ ಹೊಂದಿದೆ.