ಕೆಲವರು ಎಷ್ಟು ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಹಣಕ್ಕಾಗಿ ಬೇರೆಯವರ ಬಳಿ ಕೈ ಚಾಚುವ ಪರಿಸ್ಥಿತಿ ಎದುರಾಗುತ್ತದೆ. ಧನ ನಷ್ಟ ಹಾಗೂ ಖರ್ಚು ಹೆಚ್ಚಾಗಲು ವಾಸ್ತುದೋಷ ಕಾರಣ. ವಾಸ್ತು ಶಾಸ್ತ್ರದಲ್ಲಿ ಈಶಾನ್ಯ, ನೈಋತ್ಯ ಮತ್ತು ಉತ್ತರ ದಿಕ್ಕನ್ನು ಆರ್ಥಿಕ ಸಮೃದ್ಧಿಯ ದಿಕ್ಕೆಂದು ಪರಿಗಣಿಸಲಾಗಿದೆ. ಈ ಯಾವುದೇ ದಿಕ್ಕಿನಲ್ಲಿ ಕೊರತೆಯಿದ್ರೂ ಆರ್ಥಿಕ ನಷ್ಟ ಕಾಡುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈಶಾನ್ಯ ದಿಕ್ಕಿನಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಆದ್ದರಿಂದ ಮನೆಯ ಈಶಾನ್ಯ ದಿಕ್ಕು ಕೊಳಕಾಗಿರಬಾರದು. ಈಶಾನ್ಯ ದಿಕ್ಕು ಕೊಳಕಾಗಿದ್ದರೆ ಹಣದ ನಷ್ಟವಾಗುತ್ತದೆ.
ಮನೆಯ ಪೂರ್ವ ಹಾಗೂ ಉತ್ತರ ಭಾಗದಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. ಈ ದಿಕ್ಕಿನಲ್ಲಿ ಭಾರದ ವಸ್ತುಗಳನ್ನಿಟ್ಟರೆ ಖರ್ಚು ಹೆಚ್ಚಾಗುತ್ತದೆ.
ಮನೆಯ ನೀರಿನ ಟ್ಯಾಂಕ್ ಈಶಾನ್ಯ ಭಾಗದಲ್ಲಿರಬೇಕು. ಇದ್ರಿಂದ ಖರ್ಚು ಕಡಿಮೆಯಾಗುತ್ತದೆ. ನೈಋತ್ಯ ಕೋನದಲ್ಲಿ ನೀರಿನ ಟ್ಯಾಂಕ್ ಇದ್ದರೆ ಖರ್ಚು ಹೆಚ್ಚಾಗುತ್ತದೆ.
ಮನೆಯ ಕಪಾಟನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಅದ್ರ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತಿರಬೇಕು. ಇದ್ರಿಂದ ಖರ್ಚು ಕಡಿಮೆಯಾಗುವ ಜೊತೆಗೆ ಸದಾ ಕೈನಲ್ಲಿ ಹಣವಿರುತ್ತದೆ.