ಹಿಂದಿನ ಕಾಲದಲ್ಲಿ ನೀರನ್ನು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಯಾಕೆಂದರೆ ಈ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗಲೂ ಕೂಡ ಗ್ರಾಮೀಣ ಪ್ರದೇಶದ ಕೆಲವು ಮನೆಗಳಲ್ಲಿ ಮಣ್ಣಿನ ಮಡಿಕೆಯಲ್ಲಿ ನೀರನ್ನು ಸಂಗ್ರಹಿಸಿ ಇಡುತ್ತಾರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೂಡ ಇದು ಸಹಕಾರಿ.
ಈಗಿನ ಕಾಲದಲ್ಲಿ ಹೆಚ್ಚಿನವರ ಮನೆಯಲ್ಲಿ ಸ್ಟೀಲ್ ಡ್ರಮ್, ಪ್ಲಾಸ್ಟಿಕ್ ಬಾಟಲಿನಲ್ಲಿ ಫ್ರಿಜ್ ಗಳಲ್ಲಿ ನೀರನ್ನು ಶೇಖರಿಸಿ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಣದ ಕೊರತೆ ಸಮಸ್ಯೆ ಕಡಿಮೆ ಮಾಡಲು ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿಸಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯೊಳಗೆ ಬರುವ ಹಣದ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಒಂದು ವೇಳೆ ನಿಮಗೆ ಮಣ್ಣಿನ ಮಡಿಕೆಯ ನೀರನ್ನು ಕುಡಿಯಲು ಇಷ್ಟವಿಲ್ಲದಿದ್ದರೂ ಕೂಡ ಹಾಗೇ ತುಂಬಿಸಿ ಇಟ್ಟುಕೊಳ್ಳಬಹುದು ಎನ್ನಲಾಗಿದೆ. ಅಲ್ಲದೇ ಈ ನೀರು ತುಂಬಿದ ಮಡಿಕೆಯನ್ನು ಯಾವಾಗಲೂ ದೇವರ ದಿಕ್ಕು ಎಂದು ಕರೆಯುವ ಉತ್ತರ ದಿಕ್ಕಿನಲ್ಲಿಯೇ ಇಟ್ಟರೆ ತುಂಬಾ ಒಳ್ಳೆಯದು ಎಂದು ವಾಸ್ತು ಶಾಸ್ತ್ರಜ್ಞರ ಅಭಿಪ್ರಾಯ.