alex Certify ಆರೋಪ ಮುಕ್ತರಾಗುತ್ತಲೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಶಾಸಕ ಕೆ.ಎಸ್. ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಪ ಮುಕ್ತರಾಗುತ್ತಲೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಶಾಸಕ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ದೋಷಮುಕ್ತರಾಗಿ ಹೊರ ಬರುತ್ತೇನೆ ಎಂಬ ಖಚಿತ ವಿಶ್ವಾಸ ನನಗಿತ್ತು. ನಾನು ತಪ್ಪು ಮಾಡಿಲ್ಲ. ನಮ್ಮ ಮನೆ ದೇವತೆ ಚೌಡೇಶ್ವರಿ ನನ್ನನ್ನು ಆರೋಪಮುಕ್ತನನ್ನಾಗಿ ಮಾಡುತ್ತಾಳೆ ಎಂದು ಹಿಂದೆಯೇ ಹೇಳಿದ್ದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಭಜನೆ, ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಪ ಮುಕ್ತನಾಗಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ನನ್ನಿಂದ ಪಕ್ಷಕ್ಕೆ ಮತ್ತು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ಮುಜುಗರವಾಯ್ತಲ್ಲ ಎಂಬ ನೋವಿತ್ತು. ಅನ್ಯಾಯವಾಗಿ ಒಂದು ಜೀವ ಹೋಯ್ತಲ್ಲ. ಆತನ ಕುಟುಂಬ ಅನಾಥವಾಗಿದ್ದು ಕೂಡ ನನಗೆ ನೋವು ಕಾಡುತ್ತಿತ್ತು. ನನ್ನ ಪಾತ್ರವಿಲ್ಲದೇ ಆರೋಪ ಬಂತಲ್ಲ ಎಂಬ ದುಃಖವಿತ್ತು. ಆದರೆ, ಅಭಿಮಾನಿಗಳು ಮತ್ತು ಸಾಧು ಸಂತರು ಧೈರ್ಯ ತುಂಬಿದ್ದರು. ದೋಷಮುಕ್ತರಾಗಿ ಹೊರ ಬರುತ್ತೀರಾ ಎಂದು ಎಲ್ಲರೂ ಆಶಯ ವ್ಯಕ್ತಪಡಿಸಿದ್ದರು. ತಾಯಿ ಚೌಡೇಶ್ವರಿ ದೇವಿ ಕೃಪೆಯಿಂದ ದೋಷಮುಕ್ತನಾಗಿ ಹೊರಬಂದಿರುವೆ ಎಂದರು.

ಆ ಸಂದರ್ಭದಲ್ಲಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನವರು ಕೂಡ ನನಗೆ ದೂರವಾಣಿ ಮೂಲಕ ಅಣ್ಣಾ ನಿಮ್ಮ ತಪ್ಪಿಲ್ಲ ಎಂದು ಗೊತ್ತಿದೆ. ಪಕ್ಷದ ಅಣತಿ ಮೇರೆಗೆ ಪ್ರತಿಭಟನೆ ಮಾಡಿದ್ದೇವೆ. ದೋಷಮುಕ್ತರಾಗಿ ಹೊರಬರುತ್ತೀರಾ ಎಂದು ಹೇಳಿದ್ದರು. ಇವತ್ತು ಕೆಲವು ಕಾಂಗ್ರೆಸ್ ಮಿತ್ರರು ಅಭಿನಂದನೆ ಕೂಡ ಹೇಳಿದ್ದಾರೆ. ಬೆಳಗ್ಗೆಯಿಂದ ಸಾವಿರಾರು ಅಭಿಮಾನಿಗಳು, ಸಾಧು ಸಂತರು ದೂರವಾಣಿ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಾನು ಆಭಾರಿಯಾಗಿರುತ್ತೇನೆ ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...