ಸ್ವಲ್ಪ ಖರ್ಜೂರ
3-4 ಗೋಡಂಬಿ
2 ಏಲಕ್ಕಿ
2 ಕಪ್ ಹಾಲು
ಖರ್ಜೂರದ ಶೇಕ್ ಮಾಡುವ ವಿಧಾನ :
ಮೊದಲು ಖರ್ಜೂರವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತ್ರ ಅದ್ರ ಬೀಜವನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.
ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಇನ್ನೊಂದು ಕಡೆ ಗೋಡಂಬಿಯನ್ನು ಸ್ವಲ್ಪ ಬಿಸಿ ಮಾಡಿ. ನಂತ್ರ ಮಿಕ್ಸಿಗೆ ಖರ್ಜೂರ, ಗೋಡಂಬಿ ಹಾಗೂ ಹಾಲನ್ನು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.