ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ ಸಿಗ್ತಾಯಿಲ್ಲ.
ಇದ್ರಲ್ಲಿ ಭೋಜನ ಮಾಡುವ ವಿಧಾನ ಕೂಡ ಒಂದು. ಭವಿಷ್ಯ ಪುರಾಣದಲ್ಲಿ ಭೋಜನಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಂಶಗಳನ್ನು ಹೇಳಲಾಗಿದೆ. ಇದನ್ನು ಪಾಲಿಸುವ ವ್ಯಕ್ತಿ ಶ್ರೀಮಂತನಾಗುವುದರಲ್ಲಿ ಎರಡು ಮಾತಿಲ್ಲ.
ಊಟ ಮಾಡುವ ವೇಳೆ ಕೈ ಸ್ವಚ್ಛವಾಗಿ ತೊಳೆಯಿರಿ. ಉಗುರನ್ನು ಕತ್ತರಿಸಿ. ಹಿಂದೂ ಧರ್ಮದ ಪ್ರಕಾರ ದೇಹ ಗಾಳಿ, ಬೆಂಕಿ, ನೀರು, ಆಕಾಶ, ಭೂಮಿ ಎಲ್ಲವೂ ಸೇರಿ ನಿರ್ಮಾಣವಾಗಿದೆ. ಆಹಾರ ಸೇವನೆ ಮಾಡುವಾಗ ಈ ಐದೂ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚಮಚದ ಬದಲು ಕೈನಲ್ಲಿ ಆಹಾರ ಸೇವನೆ ಮಾಡೋದ್ರಿಂದ ನಿರೋಗಿಯಾಗಬಹುದು.
ಪುರಾಣಗಳ ಪ್ರಕಾರ ಅನ್ನದಲ್ಲಿ ಅನ್ನಪೂರ್ಣೆ ನೆಲೆಸಿರುತ್ತಾಳೆ. ಸನಾತನ ಧರ್ಮದ ಪ್ರಕಾರ ಊಟ ಮಾಡುವ ಮೊದಲು ಅನ್ನಕ್ಕೆ ನಮಸ್ಕರಿಸಬೇಕು. ಹೀಗೆ ಮಾಡಿದಲ್ಲಿ ತಿನ್ನುವ ಆಹಾರ ದೇಹಕ್ಕೆ ಹಿಡಿದು ಆರೋಗ್ಯ ವೃದ್ಧಿಯಾಗುತ್ತದೆ.
ಪುರಾತನ ಸಂಪ್ರದಾಯದ ಪ್ರಕಾರ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಬೇಕು. ಬೊಜ್ಜು, ಅಜೀರ್ಣ, ಎಸಿಡಿಟಿಯಂತಹ ಖಾಯಿಲೆಯಿಂದ ಮುಕ್ತಿ ಸಿಗಲಿದೆ. ಕುರ್ಚಿ ಮೇಲೆ ಕುಳಿತು ಆಹಾರ ಸೇವನೆ ಮಾಡುವುದರಿಂದ ಮಲಬದ್ಧತೆ, ಹೊಟ್ಟೆ ನೋವಿನಂತ ಕಾಯಿಲೆಗಳು ಕಾಡಲು ಶುರುವಾಗುತ್ತವೆ.
ಊಟ ಮಾಡಿದ ತಕ್ಷಣ ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು. ಹಾಗೆ ವ್ಯಾಯಾಮ ಮಾಡಬಾರದು.
ಧಾರ್ಮಿಕ ಗ್ರಂಥದ ಪ್ರಕಾರ ಭೋಜನ ಮಾಡುವ ಮೊದಲು ಮಂತ್ರ ಪಠಿಸಿ, ಕೈ ಮುಗಿಯಬೇಕು.
ಒಂದೇ ಸ್ಥಳದಲ್ಲಿ ಕುಳಿತು ಊಟ ಮಾಡಬೇಕು. ಅವಶ್ಯವಿರುವ ವಸ್ತುಗಳನ್ನು ಒಂದೇ ಕಡೆ ಇಟ್ಟುಕೊಳ್ಳಿ. ಊಟದ ಮಧ್ಯೆ ಪದೇ ಪದೇ ಏಳಬಾರದು.
ಊಟ ಮಾಡಿದ ನಂತ್ರ ಬಟ್ಟಲಿನಲ್ಲಿಯೇ ಕೈ ತೊಳೆಯಬೇಡಿ. ಸಂತೋಷದಿಂದ ಭೋಜನ ಮಾಡಿ. ನೋವಿನಲ್ಲಿ ಭೋಜನ ಮಾಡಿದ್ರೆ ತಾಯಿ ಅನ್ನಪೂರ್ಣೆಗೆ ಅಪಮಾನ ಮಾಡಿದಂತೆ.