ಮನೆಯ ಅಂದ ಹೆಚ್ಚಿಸಲು ಕೆಲವರು ಮನೆಯೊಳಗೆ ಅಕ್ವೇರಿಯಂನಲ್ಲಿ ಮೀನುಗಳನ್ನು ಸಾಕುತ್ತಾರೆ. ಆದರೆ ಈ ಅಕ್ವೇರಿಯಂನ್ನು ಮನೆಯಲ್ಲಿ ಇಡಬಹುದೇ? ಯಾವ ದಿಕ್ಕಿಗೆ ಇಡಬೇಕು, ಅದರಲ್ಲಿ ಯಾವ ಮೀನನ್ನು ಸಾಕಿದರೆ ಶುಭ ಎಂಬುದನ್ನು ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಮನೆಯಲ್ಲಿ ಅಕ್ವೇರಿಯಂನ್ನು ಇಟ್ಟರೆ ಒಳ್ಳೆಯದು. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಲ್ಲಿ ಗೋಲ್ಡ್ ಫಿಶ್ ಅನ್ನು ಸಾಕಿದರೆ ಒಳ್ಳೆಯದು. ಇದು ಮನೆಯ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಚಿನ್ನದಂತಹ ಹೊಳಪನ್ನು ನೀಡುತ್ತದೆ ಎಂದು ಪಂಡಿತರು ಹೇಳುತ್ತಾರೆ.
ಹಾಗೇ ಅರೋವಾನಾ ಮೀನುಗಳನ್ನು ಮನೆಯಲ್ಲಿ ಸಾಕಿದರೆ ಉತ್ತಮ. ಇದರಿಂದ ಆರೋಗ್ಯ ಮತ್ತು ಸಂಪತ್ತು ಬರುತ್ತದೆ. ವಾಸ್ತು ಪ್ರಕಾರ ಗೋಲ್ಡನ್ ಡ್ರ್ಯಾಗನ್ ಎಂದು ಕರೆಯಲ್ಪಡುವ ಅರೋವಾನಾ ಮೀನುಗಳನ್ನು ಅದೃಷ್ಟವನ್ನು ತರುವ ಶಕ್ತಿಶಾಲಿ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಸಂತೋಷ, ಪ್ರೀತಿ, ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಶಕ್ತಿಗಳನ್ನು ಮನೆಯ ಯಜಮಾನನಿಗೆ ನೀಡುತ್ತದೆಯಂತೆ.