alex Certify ಆರೋಗ್ಯ ಕಾಪಾಡುವುದರ ಜೊತೆ ರುಚಿಕರವಾಗಿರುತ್ತೆ ಈ ‘ಸಲಾಡ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಕಾಪಾಡುವುದರ ಜೊತೆ ರುಚಿಕರವಾಗಿರುತ್ತೆ ಈ ‘ಸಲಾಡ್’

ಅನೇಕರು ಲೈಟ್ ಆಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅದು ಸುಲಭವಾಗಿ ಜೀರ್ಣವಾಗುತ್ತೆ ಎಂಬುದು ಬಹುಮುಖ್ಯ ಕಾರಣ. ಕೆಲವರಿಗೆ ಸಲಾಡ್ ಎಂದ್ರೆ ಬಹಳ ಇಷ್ಟ. ನೀವು ಸಲಾಡ್ ಪ್ರಿಯರಾಗಿದ್ದರೆ ಈ ಬಾರಿ ರಷ್ಯನ್ ಸಲಾಡ್ ಮಾಡಿ ತಿನ್ನಿ.

ರಷ್ಯನ್ ಸಲಾಡ್ ಮಾಡಲು ಬೇಕಾಗುವ ಪದಾರ್ಥ:

2 ಕಪ್ ಫ್ರೆಂಚ್ ಬೀನ್ಸ್

2 ಕ್ಯಾರೆಟ್

ಹಸಿರು ಬಟಾಣಿ ಹಾಗೂ ಕತ್ತರಿಸಿ ಬೇಯಿಸಿದ ಆಲೂಗಡ್ಡೆ

½ ಕಪ್ ಅನಾನಸ್ ಹೋಳುಗಳು

½ ಕಪ್ ಕ್ರೀಂ

½ ಚಮಚ ಸಕ್ಕರೆ

ರುಚಿಗ ತಕ್ಕಷ್ಟು ಉಪ್ಪು ಮತ್ತು ಕರಿ ಮೆಣಸಿನ ಪುಡಿ.

ರಷ್ಯನ್ ಸಲಾಡ್ ಮಾಡುವ ವಿಧಾನ :

ಒಂದು ಪ್ಯಾನ್ ನಲ್ಲಿ ಫ್ರೆಂಚ್ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ, ಆಲೂಗಡ್ಡೆಯನ್ನು ಹಾಕಿ. ಇದಾದ ನಂತ್ರ ಉಪ್ಪು, ಸಕ್ಕರೆ ಕರಿಮೆಣಸಿನ ಪುಡಿ ಹಾಕಿ. ನಂತ್ರ ತಾಜಾ ಕ್ರೀಂ ಹಾಕಿ. ನಂತ್ರ ಸುಮಾರು 1 ಗಂಟೆಯವರೆಗೆ ಫ್ರಿಜ್ ನಲ್ಲಿಡಿ. ಒಂದು ಗಂಟೆ ನಂತ್ರ ರುಚಿರುಚಿ ರಷ್ಯನ್ ಸಲಾಡ್ ಸವಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...