ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕೆಲಸದ ಆಮಿಷವೊಡ್ಡಿ ನಕಲಿ ಸಹಿ ಮಾಡಿ ಆದೇಶ ಪತ್ರ ನೀಡುತ್ತಿದ್ದ ಹೊರಗುತ್ತಿಗೆ ನೌಕರನೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ಬಂಧಿತ ಆರೋಪಿ. ಬೌರಿಂಗ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಈತ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರ ಸಹಿಯನ್ನು ನಕಲು ಮಾಡಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ.
ವರುಣನ ಅಬ್ಬರದ ನಡುವೆಯೇ ಈ ದೇಗುಲದಲ್ಲಿ ನಡೆದಿದೆ ಅಚ್ಚರಿ ಘಟನೆ..!
ಆರೋಗ್ಯ ಇಲಾಖೆಯಲ್ಲಿ ಕೆಲಸ ಖಾಯಂಗೊಳಿಸುವುದಾಗಿ ಹೇಳಿ ತಬ್ರೇಜ್ ಷರೀಫ್ ಎಂಬುವವರಿಂದ 6 ಲಕ್ಷ ರೂಪಾಯಿ ಹಣ ಪಡೆದು ವಂಚನೆಯೆಸಗಿದ್ದ. ಸುಮಾರು 20ಕ್ಕೂ ಹೆಚ್ಚು ಜನರಿಗೆ ಹಣ ಪಡೆದು ವಂಚಿಸಿರುವ ಆರೋಪ ಸಂದೀಪ್ ವಿರುದ್ಧ ಕೇಳಿಬಂದಿದೆ.
ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹೆಸರಲ್ಲಿ ನಕಲಿ ಸಹಿ ಮಾಡಿ ವಂಚಿಸಿದ್ದಾನೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಿರಂಜೀವಿ, ಸಂದೀಪ್ ವಿರುದ್ಧ ದೂರು ನೀಡಿದ್ದರು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ಸಂದೀಪ್ ನನ್ನು ಬಂಧಿಸಿದ್ದಾರೆ.