ಕೆಲಸ ಹೆಚ್ಚಾದಂತೆ ವ್ಯಾಯಾಮ, ಯೋಗ ಮರೆತು ಹೋಗುತ್ತದೆ, ಸದಾ ಕಾಲದ ಹಿಂದೆ ಓಡುವ ಜನರು ಒತ್ತಡಕ್ಕೆ ಬಿದ್ದು ಆರೋಗ್ಯ ಹಾಳು ಮಾಡಿಕೊಳ್ತಾರೆ. ಅಧ್ಯಯನವೊಂದು ವ್ಯಾಯಾಮಕ್ಕೆ ಸಂಬಂಧಿಸಿದ ಆಶ್ಚರ್ಯಕರ ವಿಷ್ಯವನ್ನು ಹೊರ ಹಾಕಿದೆ.
ಯಾವ ವ್ಯಕ್ತಿ ದಿನಕ್ಕೆ 21 ನಿಮಿಷಗಳ ಕಾಲ ವ್ಯಾಯಾಮ ಮಾಡ್ತಾನೋ ಆತನ ಆಯಸ್ಸು ವ್ಯಾಯಾಮ ಮಾಡದ ವ್ಯಕ್ತಿಗಿಂತ ಮೂರು ವರ್ಷ ಹೆಚ್ಚಿರುತ್ತದೆಯಂತೆ.
ದಿನದಲ್ಲಿ 21 ನಿಮಿಷ ವ್ಯಾಯಾಮ ಮಾಡುವವರು ಅಂದ್ರೆ ತಿಂಗಳಿಗೆ ಸುಮಾರು 150 ನಿಮಿಷ ವ್ಯಾಯಾಮ ಮಾಡಿದ ವ್ಯಕ್ತಿಗಳಲ್ಲಿ ಮೂರು ವರ್ಷಗಳ ಹೆಚ್ಚುವರಿ ಜೀವನ ನಡೆಸುವ ಭರವಸೆಯಿತ್ತು ಎನ್ನಲಾಗಿದೆ. ದಿನಕ್ಕೆ 60-90 ನಿಮಿಷ ವ್ಯಾಯಾಮ ಮಾಡುವವರ ಜೀವಿತಾವಧಿ 2.4 ರಿಂದ 2.7 ವರ್ಷ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.
ವ್ಯಾಯಾಮಕ್ಕಿಂತ ಮೊದಲು ಹಾಗೂ ವ್ಯಾಯಾಮ ಮಾಡಿದ ದಿನಗಳಲ್ಲಿ ಆದ ಬದಲಾವಣೆಯನ್ನು ಅಧ್ಯಯನಕ್ಕೆ ತೆಗೆದುಕೊಂಡಿದ್ದಾರೆ. ಶೇಕಡಾ 31ರಷ್ಟು ಮಂದಿ ಸಮಯದ ಕಾರಣ, ಶೇಕಡಾ 21 ರಷ್ಟು ಮಂದಿ ವೆಚ್ಚ ಹಾಗೂ ಶೇಕಡಾ 19 ರಷ್ಟು ಮಂದಿ ಖುಷಿಯಿಲ್ಲದ ಕಾರಣ ಹೇಳಿ ವ್ಯಾಯಾಮ ಮಾಡೋದನ್ನು ಬಿಡ್ತಾರಂತೆ.