alex Certify ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗೊರಕೆ ಕಿರಿಕಿರಿಯಾ..…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗೊರಕೆ ಕಿರಿಕಿರಿಯಾ..…?

ಗೊರಕೆ ಬಗ್ಗೆ ನಡೆದ ಅಧ್ಯಯನಗಳು ಒಂದೆರಡಲ್ಲ. ಗೊರಕೆ ಕಾರಣಕ್ಕೆ ಡೈವೋರ್ಸ್ ನಡೆದ ಉದಾಹರಣೆಗಳೂ ಇವೆ. ಇದರಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.

ಅಧ್ಯಯನ ಒಂದರ ಪ್ರಕಾರ ಕಡಿಮೆ ನಿದ್ರೆ ಮಾಡುವವರು ಹೆಚ್ಚು ಗೊರಕೆ ಹೊಡೆಯುತ್ತಾರೆ. ದೀರ್ಘಕಾಲದ ನಿದ್ರಾಹೀನತೆಯಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಿದ್ರೆಯು ನಮ್ಮ ಕೆಲಸದ ಶಕ್ತಿ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ನೇರವಾಗಿ ಗೊರಕೆ ನಿರುಪದ್ರವಿಯಾದರೂ ಗಂಭೀರವಾದ ನಿದ್ರಾಹೀನತೆಗೆ ಕಾರಣವಾಗಲಿದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಾಗಾಗಿ ವಿಪರೀತ ಗೊರಕೆ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆಯುವುದೇ ಒಳ್ಳೆಯದು ಎಂಬುದನ್ನು ತಜ್ಞರು ಅಭಿಪ್ರಾಯಪಡುತ್ತಾರೆ.

ರಾತ್ರಿ ಮಲಗುವ ಮುನ್ನ ಆಲ್ಕೋಹಾಲ್ ಸೇವಿಸುವುದರಿಂದಲೂ ಗೊರಕೆ ಹೆಚ್ಚುವ ಸಾಧ್ಯತೆಗಳಿವೆ. ಕನಿಷ್ಠ ಏಳು ಗಂಟೆಗಳ ನಿದ್ರೆ ನಿಮ್ಮನ್ನು ಹಲವು ರೋಗಗಳಿಂದ ದೂರವಿಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...