alex Certify ಆರೋಗ್ಯದ ಮೇಲೆ ಪರಿಣಾಮ ಪರಿಣಾಮ ಬೀರುತ್ತೆ ಈ ಕೆಟ್ಟ ಹವ್ಯಾಸ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಮೇಲೆ ಪರಿಣಾಮ ಪರಿಣಾಮ ಬೀರುತ್ತೆ ಈ ಕೆಟ್ಟ ಹವ್ಯಾಸ…..!

What Are Boogers? Composition, Bodily Function, and Moreನಮ್ಮ ಕೆಟ್ಟ ಹವ್ಯಾಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಕ್ಕಳು ಮೂಗಿನ ಕಿಟ್ಟವನ್ನು ಬಾಯಿಗೆ ಹಾಕ್ತಾರೆ. ದೊಡ್ಡವರಲ್ಲಿಯೂ ಈ ಅಭ್ಯಾಸವಿರುತ್ತದೆ. ಮೂಗಿನ ಕಿಟ್ಟ ಆರೋಗ್ಯ ಹಾಳು ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಸಂಶೋಧಕ ಪ್ರಕಾರ ಮೂಗಿನ ಎದುರಿನಲ್ಲಿ ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾ ಇರುತ್ತದೆ. ಕಿಟ್ಟ ಸೇವನೆ ಮಾಡಿದಾಗ ಈ ಬ್ಯಾಕ್ಟೀರಿಯಾ ದೇಹ ಸೇರುತ್ತದೆ. ಈ ಬ್ಯಾಕ್ಟೀರಿಯಾ ಸಂಖ್ಯೆ ದೇಹದಲ್ಲಿ ಹೆಚ್ಚಾದಂತೆ, ಮೂಗಿನಿಂದ ರಕ್ತ ಬರುವುದು, ಅಲರ್ಜಿ, ಮೂಗಿನಲ್ಲಿ ಉರಿಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮೂಗಿನಲ್ಲಿ ಕೀವು ತುಂಬಿಕೊಳ್ಳುವ ಸಮಸ್ಯೆ ಕೂಡ ಕಾಡುವ ಸಾಧ್ಯತೆಯಿರುತ್ತದೆ. ಇದು ವ್ಯಕ್ತಿ ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಮೂಗನ್ನು ಸ್ವಚ್ಛಗೊಳಿಸಿದ ನಂತ್ರ ಕೈ ತೊಳೆದುಕೊಳ್ಳದೆ ಹೋದ್ರೆ ಅನೇಕ ಸಮಸ್ಯೆ ಕಾಡಲು ಕಾರಣವಾಗುತ್ತದೆಯಂತೆ. ಮಕ್ಕಳಿಗೆ ಇದು ಹೆಚ್ಚು ಅಪಾಯಕಾರಿ. ಮಕ್ಕಳ ಮೂಗಿನಿಂದ ರಕ್ತ ಬರಲು ಶುರುವಾಗಿ ಮಕ್ಕಳು ಪ್ರಜ್ಞೆ ತಪ್ಪುವ ಸಾಧ್ಯತೆಯಿದೆಯಂತೆ. ವೈದ್ಯರ ಪ್ರಕಾರ, ಸ್ವಚ್ಛ ಬಟ್ಟೆಯಲ್ಲಿ ಮೂಗನ್ನು ಸ್ವಚ್ಛಗೊಳಿಸಿಕೊಳ್ಳಬೇಕಂತೆ. ನಂತ್ರ ಕೈ ಸ್ವಚ್ಛವಾಗಿ ತೊಳೆಯಬೇಕಂತೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...