ಜಿಲೇಬಿ ರುಚಿಯನ್ನು ನೋಡದವರಿಲ್ಲ. ಜಿಲೇಬಿಗೆ ʼಭಾರತದ ರಾಷ್ಟ್ರೀಯ ಸಿಹಿತಿಂಡಿʼ ಎಂಬ ಸ್ಥಾನಮಾನವೂ ಸಿಕ್ಕಿದೆ. ಜಿಲೇಬಿ ರುಚಿಯಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಬಿಸಿ ಜಿಲೇಬಿಯನ್ನು ಹಾಲಿನೊಂದಿಗೆ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಜಿಲೇಬಿಯನ್ನು ಮೊಸರಿನ ಜೊತೆ ತಿನ್ನಲು ಇಷ್ಟಪಡುವ ಜನರಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಹಾಲು ಮತ್ತು ಜಿಲೇಬಿಯನ್ನು ಜೊತೆಯಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.
ಹಾಲು ಮತ್ತು ಜಿಲೇಬಿಯ ಪ್ರಯೋಜನಗಳು…
ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ರಾಮಬಾಣವಿದ್ದಂತೆ. ಮೈಗ್ರೇನ್ ತೊಂದರೆ ಇರುವವರು ಜಿಲೇಬಿ ಮತ್ತು ಹಾಲನ್ನು ಸೇವನೆ ಮಾಡಬೇಕು. ಇದರೊಂದಿಗೆ ವೈದ್ಯರ ಸಲಹೆಯನ್ನೂ ಪಡೆಯಬೇಕು. ಹಾಲು ಮತ್ತು ಜಿಲೇಬಿಯನ್ನು ಜೊತೆಯಾಗಿ ತಿನ್ನುವುದರಿಂದ ಮೈಗ್ರೇನ್ ಕಡಿಮೆಯಾಗುತ್ತದೆ.
ಜಿಲೇಬಿ ಮತ್ತು ಹಾಲು ಒತ್ತಡ ನಿರ್ವಹಣೆಯಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ ಹಾಲು ಜಿಲೇಬಿ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಇದು ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ. ಶೀತ ಮತ್ತು ಜ್ವರದಿಂದ ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲ ಎಲ್ಲಾ ಇತರ ಸಾಂಕ್ರಾಮಿಕ ರೋಗಗಳನ್ನು ತಡೆಯುತ್ತದೆ.
ಕಾಮಾಲೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆ ಮೇರೆಗೆ ಜಿಲೇಬಿ ಮತ್ತು ಹಾಲನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ ಕಾಮಾಲೆ ನಿವಾರಣೆಯಾಗುತ್ತದೆ ಮತ್ತು ಕ್ರಮೇಣ ಜಾಂಡೀಸ್ನ ಲಕ್ಷಣಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಹಾಲು ಮತ್ತು ಜಿಲೇಬಿ ಆಸ್ತಮಾ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ.