ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರ ಹಾನಿಕಾರಕ ಹಾಗೂ ನಿರಂತರವಾಗಿ ಇದನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ದೂರುವುದನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?
ಈ ಆಹಾರ ವಿಕಿರಣಕ್ಕೆ ಒಳಗಾಗುವ ಕಾರಣ ಕ್ಯಾನ್ಸರ್ ನಂಥ ಸಮಸ್ಯೆಗಳು ಉಂಟಾಗುತ್ತವೆ ಎಂಬ ಆಪಾದನೆಯಲ್ಲಿ ಹುರುಳಿಲ್ಲ. ಇದರಲ್ಲಿ ವಿದ್ಯುತ್ ಕಾಂತೀಯ ತರಂಗಗಳನ್ನು ಬಳಸಿ ಆಹಾರ ಬೇಯಿಸಲಾಗುತ್ತದೆ. ಅದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.
ʼಜಂಕ್ ಫುಡ್ʼ ಪ್ರಿಯರಿಗೆ ಇಲ್ಲಿದೆ ಒಂದಷ್ಟು ಟಿಪ್ಸ್
ಮೈಕ್ರೋವೇವ್ ದುಬಾರಿ ಎನ್ನಲಾಗುತ್ತದೆ. ಗ್ಯಾಸ್ ನಿರ್ವಹಣಾ ಖರ್ಚುಗಳನ್ನು ಗಮನಿಸಿದರೆ ಮೈಕ್ರೋವೇವ್ ಕಡಿಮೆ ಖರ್ಚು ಬೀಳುತ್ತದೆ. ಇದರಲ್ಲಿ 15 ರಿಂದ 20 ನಿಮಿಷದೊಳಗೆ ನಿಮ್ಮ ಆಹಾರ ಬೇಯುತ್ತದೆ. ಅಡುಗೆಗೆ ಕರೆಂಟ್ ಸ್ಟೌವ್ ಬಳಸುವವರು ಮೈಕ್ರೋವೇವ್ ಬಳಸುವುದರಿಂದ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.
ಮೈಕ್ರೋವೇವ್ ನಲ್ಲಿ ಆಹಾರ ತಯಾರಿಸಿದರೆ ಪೋಷಕಾಂಶಗಳು ನಷ್ಟವಾಗುತ್ತವೆ ಎನ್ನುವುದು ಸುಳ್ಳು. ಮೈಕ್ರೋವೇವ್ ನಲ್ಲಿ ಬೇಯಿಸುವಾಗ ಅದರ ನೀರಿನಂಶ ತೆಗೆಯದೆ ಇರುವ ಕಾರಣ ಪೋಷಕಾಂಶಗಳು ನಷ್ಟವಾಗದೆ ಉಳಿಯುತ್ತವೆ. ಮೈಕ್ರೋವೇವ್ ಅನ್ನು ಕೇವಲ ಬಿಸಿ ಮಾಡಲು ಮಾತ್ರ ಬಳಸುವವರೂ ಹಲವರಿದ್ದಾರೆ.