ಬೆಳ್ಳುಳ್ಳಿ ಅತ್ಯದ್ಭುತ ಆರೋಗ್ಯಕಾರಿ ಗುಣಗುಳುಳ್ಳ ಮಸಾಲೆ ಪದಾರ್ಥ. ಇದನ್ನು ಭಾರತೀಯ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬಳಸಿ ಮಾಡಿದ ತಿನಿಸುಗಳ ರುಚಿ ಡಬಲ್ ಆಗುತ್ತದೆ. ಆದರೆ ಕೆಲವರು ಬೆಳ್ಳುಳ್ಳಿ ತಿನ್ನಲು ಇಷ್ಟಪಡುವುದಿಲ್ಲ.
ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 1, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ರಂಜಕ ಮತ್ತು ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಬೆಳ್ಳುಳ್ಳಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದರೆ ಇದರ ಹೊರತಾಗಿ ಕೆಲವು ಅನಾನುಕೂಲಗಳು ಕೂಡ ಇದರಿಂದಾಗುತ್ತವೆ. ಹಾಗಾಗಿ ಬೆಳ್ಳುಳ್ಳಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ನಾವೇಕೆ ಹೆಚ್ಚು ಬೆಳ್ಳುಳ್ಳಿ ತಿನ್ನಬಾರದು ?
ಬೆಳ್ಳುಳ್ಳಿಯನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಅದನ್ನು ಅತಿಯಾಗಿ ಸೇವಿಸಿದರೆ ತೊಂದರೆ ಖಚಿತ. ಹಾಗಾಗಿಯೇ ಬೆಳ್ಳುಳ್ಳಿಯನ್ನು ಸೇವಿಸುವಾಗ ಜಾಗರೂಕರಾಗಿರಬೇಕು.
ಬಾಯಿ ವಾಸನೆ: ಬೆಳ್ಳುಳ್ಳಿಯ ಪರಿಣಾಮವು ಬಿಸಿಯಾಗಿರುತ್ತದೆ. ಆದ್ದರಿಂದ ಜನರು ಶೀತಕ್ಕೆ ಸಂಬಂಧಿಸಿದ ಖಾಯಿಲೆಗಳಿದ್ದಾಗ ಬೆಳ್ಳುಳ್ಳಿ ಎಸಳುಗಳನ್ನು ಅಗಿದು ತಿನ್ನುತ್ತಾರೆ. ಆದರೆ ಇದನ್ನು ಅತಿಯಾಗಿ ತಿಂದರೆ ಬಾಯಿ ದುರ್ವಾಸನೆ ಬರಲಾರಂಭಿಸುತ್ತದೆ. ಏಕೆಂದರೆ ಹಸಿ ಬೆಳ್ಳುಳ್ಳಿಯಲ್ಲಿ ಬಲವಾದ ವಾಸನೆ ಇರುತ್ತದೆ.
ಕಡಿಮೆ ರಕ್ತದೊತ್ತಡ: ಕಡಿಮೆ ರಕ್ತದೊತ್ತಡ ಹೊಂದಿರುವ ಜನರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಏಕೆಂದರೆ ಇದು ಲೋ ಬಿಪಿಗೆ ಕಾರಣವಾಗಬಹುದು. ಅಂದರೆ ಹೈಪೊಟೆನ್ಷನ್, ಇದು ದೇಹದಲ್ಲಿ ದೌರ್ಬಲ್ಯ ಮತ್ತು ಆಯಾಸವನ್ನು ಉಂಟುಮಾಡುತ್ತದೆ.
ಎದೆಯುರಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬೆಳ್ಳುಳ್ಳಿಯನ್ನು ಸೇವಿಸಿದರೆ ಎದೆಯಲ್ಲಿ ಉರಿ ಶುರುವಾಗುತ್ತದೆ. ಬೆಳ್ಳುಳ್ಳಿ ಆಮ್ಲೀಯ ಸಂಯುಕ್ತಗಳನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವಿಸಿದರೆ, ಎದೆಯಲ್ಲಿ ತೀವ್ರವಾದ ಸುಡುವ ಸಂವೇದನೆಯ ಅಪಾಯವಿದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಕೂಡ ಮಿತವಾಗಿ ಸೇವಿಸಬೇಕು.