ಬಾರ್ಲಿಯು ಅಪಾರ ಪೋಷಕಾಂಶ ಹೊಂದಿರುವ ಆಹಾರ. ಇತ್ತೀಚಿನ ದಿನಗಳಲ್ಲಿ ಇದರಿಂದ ತಯಾರಿಸಿದ ಹೆಲ್ತ್ ಡ್ರಿಂಕ್ ಪ್ರತಿಯೊಬ್ಬರೂ ಸೇವಿಸುತ್ತಾರೆ. ಹಾಗೇ ಈ ಬಾರ್ಲಿ ಬಳಸಿ ಸೂಪ್ ಕೂಡ ತಯಾರಿಸಬಹುದು. ಹೇಗೆ ಅಂತ ನೋಡಿ.
ಬೇಕಾಗುವ ಸಾಮಾಗ್ರಿಗಳು
ಶುಂಠಿ 1 ಇಂಚು
ಬೆಳ್ಳುಳ್ಳಿ 10 ಎಸಳು
ಈರುಳ್ಳಿ 1/2
ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೋಸು ಎಲ್ಲಾ ಸೇರಿ 1 ಕಪ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ/ಬೆಣ್ಣೆ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಪಾವ್ ಬಾಜಿ ಮಸಾಲೆ 1 ಚಮಚ
ಕಾಳುಮೆಣಸಿನ ಪುಡಿ 1/2 ಚಮಚ
ಬಾರ್ಲಿ 100 ಗ್ರಾಂ
ನೀರು 1 ಲೀಟರ್
ಮಾಡುವ ವಿಧಾನ
ಮೊದಲು ಬಾರ್ಲಿಯನ್ನು ಕುಕ್ಕರಿನಲ್ಲಿ ಹಾಕಿ ನೀರನ್ನು ಸೇರಿಸಿ 10 ವಿಷಲ್ ಕೂಗಿಸಬೇಕು. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಶುಂಠಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಹಾಕಿ ಹುರಿದ ಬಳಿಕ ತರಕಾರಿಗಳನ್ನು ಸೇರಿಸಿ ಬೇಯಿಸಬೇಕು.
ನಂತರ ಬೆಂದ ಬಾರ್ಲಿ ಮತ್ತು ಅದರ ನೀರನ್ನು ಹಾಕಿ ತದನಂತರ ಉಪ್ಪನ್ನು ಸೇರಿಸಿ ಕುದಿಸಬೇಕು. ಅದಕ್ಕೆ ಪಾವ್ ಬಾಜಿ ಮಸಾಲೆ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಆರೋಗ್ಯಕರವಾದ ಬಾರ್ಲಿ ಸೂಪ್ ಸವಿಯಲು ಸಿದ್ಧ.