
ಕೆಲವರು ಗರಂ ಮಸಾಲೆ ವಾಸನೆ ನಮಗಾಗದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಗರಂ ಮಸಾಲೆ ಬಳಸಿ ಮಾಡಿದ ಅಡುಗೆ ಕೂಡ ಕೆಲವರು ಇಷ್ಟಪಡುವುದಿಲ್ಲ. ಆದರೆ ಮನೆಯಲ್ಲೇ ತಯಾರಿಸಿದ ಗರಂ ಮಸಾಲೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ.
ಗರಂ ಮಸಾಲೆ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ತಯಾರಿ ವೇಳೆ ಬಳಸುವ ಜೀರಿಗೆ ಹಾಗೂ ಕಾಳು ಮೆಣಸುಗಳು ಜೀರ್ಣಾಂಗ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ.
ಗರಂ ಮಸಾಲೆ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ದಾಲ್ಚಿನಿ ಚಕ್ಕೆ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಹೊಂದಿವೆ. ಹೀಗಾಗಿ ಇದರ ಸೇವನೆಯೂ ಒಳ್ಳೆಯದೇ. ಏಲಕ್ಕಿ ಹಾಗೂ ಲವಂಗ ಕೂಡಾ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದೆ.
ಕೊತ್ತಂಬರಿ ಬೀಜವೂ ಕೊಲೆಸ್ಟ್ರಾಲ್ ವಿರೋಧಿ ಗುಣ ಹೊಂದಿದ್ದು, ನೀವು ಸೇವಿಸುವ ಆಹಾರದ ಕ್ಯಾಲೋರಿಯನ್ನು ಇಳಿಸುತ್ತದೆ. ಗರಂ ಮಸಾಲೆಗೆ ಬಳಸುವ ವಸ್ತುಗಳೆಲ್ಲ ನೈಸರ್ಗಿಕ ಮಸಾಲೆಗಳಾದ್ದರಿಂದ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಹಾಗಾಗಿ ಇದನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಕಡ್ಡಾಯವಾಗಿ ಸೇರಿಸಿಕೊಳ್ಳಿ. ಆದರೆ ಅತಿಯಾಗಿ ಸೇವಿಸಬೇಡಿ.