ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ ಬೇಗನೇ ಮಾಡಿಬಿಡಬಹುದು.
ಬೇಕಾಗುವ ಸಾಮಾಗ್ರಿಗಳು:
1 ಕಪ್ ಬೇಯಿಸಿದ ಕಾಬೂಲ್ ಕಡಲೆಕಾಳು, ½ ಕಪ್ – ಸೌತೆಕಾಯಿ, ½ ಕಪ್ – ಈರುಳ್ಳಿ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ½ ಕಪ್ –ಟೊಮೆಟೊ, 1 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು, 1 ½ ಟೀ ಸ್ಪೂನ್ – ಲಿಂಬೆಹಣ್ಣಿನ ರಸ, ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – ಚಿಟಿಕೆ.
ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಬೇಯಿಸಿದ ಕಾಬೂಲ್ ಕಡಲೆಕಾಳು, ಸೌತೆಕಾಯಿ ಪೀಸ್, ಈರುಳ್ಳಿ, ಟೊಮೆಟೊ, ಕೊತ್ತಂಬರಿಸೊಪ್ಪು, ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಸರ್ವ್ ಮಾಡುವಾಗ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ. ಒಂದು ಬೌಲ್ ತಿಂದರೆ ಹೊಟ್ಟೆ ತುಂಬಿದ ಹಾಗೇ ಆಗುತ್ತದೆ.