ಬೇಸಿಗೆಯ ಬೇಗೆ ಆರಂಭವಾಗಿದೆ. ಎಷ್ಟು ನೀರು ಕುಡಿದರೂ ಸಾಕೆನಿಸದ ದಾಹ ಕಾಡುತ್ತಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹ ನಿರ್ಜಲೀಕರಣಗೊಳ್ಳುವುದು ಉತ್ತಮವಲ್ಲ. ಇವುಗಳಿಂದ ರಕ್ಷಣೆ ಪಡೆಯಲು ಇಲ್ಲಿದೆ ಒಂದು ಉಪಾಯ.
ಮಡಕೆಯಲ್ಲಿ ನೀರನ್ನು ಸಂಗ್ರಹಿಸಿಟ್ಟು ಕುಡಿಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಮಣ್ಣಿನ ಮಡಿಕೆಯಲ್ಲಿ ಅಥವಾ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಸ್ಟೀಲ್, ಪ್ಲಾಸ್ಟಿಕ್ ಅಥವಾ ಗಾಜಿನ ಜಾಡಿಗಳಲ್ಲಿ ಇಟ್ಟ ನೀರಿಗಿಂತ ಉತ್ತಮವಾದುದು. ಮಡಕೆಯ ನೀರು ಅಪ್ಪಟವಾಗಿದ್ದು ಜೀವ ರಾಸಾಯನಿಕ ಕ್ರಿಯೆ ಸುಲಭವಾಗಿಸುತ್ತದೆ.
ಬಾಟಲ್ ಗಳು ಬಿಸಿಯಾದಾಗ ಬಿಡುವ ರಾಸಾಯನಿಕಗಳು ದೇಹಕ್ಕೆ ಉತ್ತಮವಾದುದಲ್ಲ. ಅದೇ ಮಡಕೆಯ ನೀರು ಮಣ್ಣಿನಂಶದಿಂದ ಕೆಂಪಾದರೂ ಅದನ್ನು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ದೇಹಕ್ಕಿದೆ.
ಇಂದು ಸಂಜೆ ಮಡಕೆಯಲ್ಲಿ ನೀರು ಹಾಕಿ ನಾಳೆ ಅದನ್ನು ಸೇವಿಸುವುದು ಅತ್ಯುತ್ತಮ ವಿಧಾನ. ಇದರಿಂದ ಗಂಟಲು ತುರಿಕೆ, ಸೀನುವಿಕೆಗಳೂ ಕಡಿಮೆಯಾಗುತ್ತವೆ.