ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ.
ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಲವಂಗ, 4 ಕಾಳುಮೆಣಸು, ¼ ಟೀ ಸ್ಪೂನ್ ಜೀರಿಗೆ, 1 ಏಲಕ್ಕಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಅದಕ್ಕೆ 1 ಗ್ಲಾಸ್ ನೀರು ಸೇರಿಸಿ. ನೀರು ಅರ್ಧ ಗ್ಲಾಸ್ ಆಗುವವರೆಗೆ ಕುದಿಸಿ. ನಂತರ ಇದಕ್ಕೆ 1.5 ಗ್ಲಾಸ್ ಹಾಲು ಸೇರಿಸಿ ಕುದಿಸಿ.
ನಂತರ ಗ್ಯಾಸ್ ಆಫ್ ಮಾಡಿ. ಇದನ್ನು ಒಂದು ಗ್ಲಾಸ್ ಗೆ ಸೋಸಿಕೊಳ್ಳಿ. ಈ ಸಮಯದಲ್ಲಿ ಬೇಕಿದ್ದರೆ ಸಕ್ಕರೆ ಅಥವಾ ಬೆಲ್ಲ ಸೇರಿಸಿಕೊಳ್ಳಿ. ಹಾಗೆಯೇ ಬೇಕಿದ್ದರೂ ಕುಡಿಯಬಹುದು.