ನೆಲ್ಲಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ನೆಲ್ಲಿ ಕಾಯಿಯನ್ನು ಅನೇಕ ವಿಧಾನಗಳಲ್ಲಿ ಸೇವಿಸಬಹುದು. ಕೆಲವರು ಹಸಿ ನೆಲ್ಲಿಕಾಯಿ ತಿಂದ್ರೆ ಮತ್ತೆ ಕೆಲವರು ಉಪ್ಪು, ಖಾರ ಸೇರಿಸಿ ಸೇವನೆ ಮಾಡ್ತಾರೆ.
ಮತ್ತೆ ಕೆಲವರು ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ. ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವವರೂ ಸಾಕಷ್ಟು ಮಂದಿ. ಚಳಿಗಾಲದಲ್ಲಿ ನೆಲ್ಲಿಕಾಯಿಯನ್ನು ಅವಶ್ಯವಾಗಿ ತಿನ್ನಬೇಕು. ನೆಲ್ಲಿಕಾಯಿ ಚಳಿಗಾಲದಲ್ಲಿ ಕಾಡುವ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.
ಹೃದಯದ ಆರೋಗ್ಯಕ್ಕೂ ನೆಲ್ಲಿಕಾಯಿ ಒಳ್ಳೆಯದು. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವವರು ಅವಶ್ಯವಾಗಿ ನೆಲ್ಲಿಕಾಯಿ ತಿನ್ನಬೇಕು.
ಚರ್ಮದ ಆರೋಗ್ಯಕ್ಕೂ ನೆಲ್ಲಿಕಾಯಿ ಬೆಸ್ಟ್. ವಿಟಮಿನ್ ಸಿ ಚರ್ಮದ ಸೌಂದರ್ಯವನ್ನು ಕಾಪಾಡುತ್ತದೆ. ಚರ್ಮಕ್ಕೆ ಬಹುಬೇಗ ಸುಕ್ಕು ಬರದಂತೆ ನೋಡಿಕೊಳ್ಳುತ್ತದೆ. ಚರ್ಮದ ಹೊಳಪನ್ನು ಇದು ಹೆಚ್ಚಿಸುತ್ತದೆ. ನೆಲ್ಲಿಕಾಯಿ ಪುಡಿಗೆ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು.