ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ.
ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕೊಬ್ಬು, ಖನಿಜ, ಶಕ್ತಿ, ಸುಣ್ಣ ಮತ್ತು ಕ್ಯಾರೋಟಿನ್ ಹಾಗೂ ಜೀವಸತ್ವಗಳು ಇದರಲ್ಲಿ ಅಡಗಿವೆ.
ಪುಂಡಿ ಎಲೆಗಳಿಂದ ಪಲ್ಯ ಮಾಡುತ್ತಾರೆ. ಇದರ ತೊಗಟೆಯಿಂದ ನಾರು ತಯಾರಿಸುತ್ತಾರೆ. ಇದರ ಕಾಳುಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಈ ಗಿಡದ ನಾರುಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರೆ. ಈ ಸೊಪ್ಪನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉರಿ ನಿವಾರಣೆ ಆಗುತ್ತದೆ. ಆಹಾರದ ರುಚಿ ಹೆಚ್ಚುತ್ತದೆ. ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚು ನಾರಿನ ಅಂಶ ಇರುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಮೂಲವ್ಯಾಧಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಪಿತ್ತದಿಂದ ಉಂಟಾದ ವಾಕರಿಕೆಯನ್ನು ನಿವಾರಣೆ ಮಾಡುತ್ತದೆ. ಎಲೆಗಳ ಕಷಾಯವನ್ನು ತಯಾರಿಸಿ ಸೇವಿಸುವುದರಿಂದ ಕೆಮ್ಮು ಗುಣಮುಖವಾಗುತ್ತದೆ. ದೇಹದಲ್ಲಿ ಇರುವ ನೋವಿಗೆ ಇದು ಔಷಧಿಯಾಗಿ ಕೆಲಸ ಮಾಡುತ್ತದೆ.