ಬೇಕಾಗುವ ಸಾಮಾಗ್ರಿಗಳು:
ದೋಸೆ ಅಕ್ಕಿ- 4 ಕಪ್, ಸೌತೆಕಾಯಿ- 4 ಕಪ್, ಕಾಯಿತುರಿ- 3/4 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
3 ರಿಂದ 4 ಗಂಟೆ ದೋಸೆ ಅಕ್ಕಿ ನೆನೆಸಿಡಬೇಕು. ನಂತರ ಸೌತೆಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್’
ನೆನೆಸಿಟ್ಟ ಅಕ್ಕಿಯನ್ನು ರುಬ್ಬಬೇಕು. ಜೊತೆಗೆ ತೆಂಗಿನತುರಿ ಹಾಕಿ ರುಬ್ಬಿ. ಅರ್ಧ ರುಬ್ಬಿದ ಬಳಿಕ ಸೌತೆಕಾಯಿ ಸೇರಿಸಿ ರುಬ್ಬಿಕೊಳ್ಳಿ. ಈ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಬಳಿಕ ದೋಸೆ ತವಾದಲ್ಲಿ ಹಿಟ್ಟು ಹುಯ್ಯಿದರೆ ರುಚಿಯಾದ ಸೌತೆಕಾಯಿ ದೋಸೆ ಸವಿಯಲು ಸಿದ್ಧ.