ಸಂಜೆಯ ಸ್ನ್ಯಾಕ್ಸ್ ಅಥವಾ ಬೆಳಿಗ್ಗಿನ ತಿಂಡಿಗೆ ಆರೋಗ್ಯಕರವಾದದ್ದು ಮಾಡಿಕೊಂಡು ತಿಂದರೆ ದೇಹಕ್ಕೂ ಒಳ್ಳೆಯದು. ಇಲ್ಲಿ ಸೊಪ್ಪಿನ ತಾಲಿಪಟ್ಟು ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು : 2 ಬಟ್ಟಲು ಜೋಳದ ಹಿಟ್ಟು, 1 ಬಟ್ಟಲು ಗೋಧಿ ಹಿಟ್ಟು, 1/4 ಕಪ್ ಕಡಲೆ ಹಿಟ್ಟು, 2 ಬಟ್ಟಲು ಮೆಂತ್ಯ ಸೊಪ್ಪು
2 ಬಟ್ಟಲು ಸಬ್ಬಸಿಗೆ ಸೊಪ್ಪು ಸಣ್ಣಗೆ ಹೆಚ್ಚಿದ್ದು, 2 ಚಮಚ ಹಸಿಮೆಣಸಿನಕಾಯಿ ಪೇಸ್ಟ್ , ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಪುದೀನಾ, 1 ಇಂಚು ಶುಂಠಿ, 6-7 ಎಸಳು ಬೆಳ್ಳುಳ್ಳಿ , 1/4 ಚಮಚ ಜೀರಿಗೆ, 1 ಚಮಚ ಅರಶಿನ ಪುಡಿ , 1 ಚಮಚ ಗರಂ ಮಸಾಲಾ, 2 ಚಮಚ ಎಣ್ಣೆ.
ಮಾಡುವ ವಿಧಾನ : ಒಂದು ಪಾತ್ರೆಗೆ ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು, ಪುದೀನಾ ಸೊಪ್ಪು, ಜಜ್ಜಿದ ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಪುಡಿ, ಜೀರಿಗೆ ಪುಡಿ, ಮತ್ತು ಗರಂ ಮಸಾಲಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ನಂತರ ಉಂಡೆ ಕಟ್ಟಿಕೊಂಡು ತಟ್ಟಿ ಹದ ಗಾತ್ರದ ಚಪಾತಿಯಂತೆ ಲಟ್ಟಿಸಿಕೊಳ್ಳಿ. ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾದಾಗ ತುಸು ಎಣ್ಣೆ ಸವರಿ ಲಟ್ಟಿಸಿಕೊಂಡ ತಾಲಿಪಟ್ಟು ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ‘ತಾಲಿಪಟ್ಟು ‘ ರೆಡಿ.