ದೇಹದ ಆರೋಗ್ಯವನ್ನ ಕಾಪಾಡಿಕೊಳ್ಳೋದು ಎಷ್ಟು ಮುಖ್ಯವೋ ಅದೇ ರೀತಿ ಲೈಂಗಿಕ ಆರೋಗ್ಯವನ್ನ ಕಾಪಾಡಿಕೊಳ್ಳೋದು ಸಹ ಪ್ರಾಮುಖ್ಯತೆಯನ್ನ ಪಡೆದುಕೊಳ್ಳುತ್ತೆ. ಪ್ರತಿಯೊಬ್ಬ ಪುರುಷನೂ ಉತ್ತಮ ಲೈಂಗಿಕ ಆರೋಗ್ಯವನ್ನ ಹೊಂದಿದ್ದಾರೆ ಎಂದು ಹೇಳಲು ಬರೋದಿಲ್ಲ. ಆದರೆ ನಿಮ್ಮ ಜೀವನ ಶೈಲಿಯಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಿದಲ್ಲಿ ಲೈಂಗಿಕ ಕ್ರಿಯೆ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ.
ಮಿಸ್ಟರ್ಸ್ ಎಂಬ ದಾಖಲೆಯು ನೀಡಿದ ಮಾಹಿತಿಯ ಪ್ರಕಾರ ರಾತ್ರಿ 7 ಗಂಟೆಗೂ ಅಧಿಕ ಕಾಲ ನಿದ್ರೆ ಮಾಡುವ 31.7 ಪ್ರತಿಶತ ಪುರುಷರು ಉತ್ತಮ ಲೈಂಗಿಕ ಆರೋಗ್ಯವನ್ನ ಹೊಂದಿರುತ್ತಾರೆ. ಮಾಹಿತಿಯ ಪ್ರಕಾರ ಉತ್ತಮ ನಿದ್ರೆ ಮಾಡುವ ಪುರುಷನ ಶಿಶ್ನವು ದೀರ್ಘ ಅವಧಿಯವರೆಗೆ ನಿಮಿರಲಿದೆ ಎಂದು ಅಧ್ಯಯನ ಹೇಳಿದೆ.
ಅದೇ ರೀತಿ 5 ಗಂಟೆಗೂ ಕಡಿಮೆ ಅವಧಿ ನಿದ್ರೆ ಮಾಡುವ ಪುರುಷರಲ್ಲಿ ಕೇವಲ 18 ಪ್ರತಿಶತ ಪುರುಷರು ಮಾತ್ರ ಲೈಂಗಿಕ ಕ್ರಿಯೆಯ ಆನಂದವನ್ನ ಅನುಭವಿಸಬಲ್ಲರಂತೆ. ಇನ್ನು ಉತ್ತಮ ವ್ಯಾಯಾಮಗಳನ್ನ ಮಾಡದ ಪುರುಷರಲ್ಲಿ 19.5 ಪ್ರತಿಶತ ಮಂದಿ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಹೊಂದಿದ್ದಾರೆ. ಆದರೆ ವ್ಯಾಯಾಮ ಮಾಡುವಂತ ಅಭ್ಯಾಸ ಹೊಂದಿರುವವರಲ್ಲಿ 27 ಪ್ರತಿಶತ ಪುರುಷರ ಸೆಕ್ಸ್ ಲೈಫ್ ಚೆನ್ನಾಗಿ ಇದೆಯಂತೆ..!
ಈ ಡೇಟಾಗಳನ್ನ ಗಮನಿಸಿದಾದ ಉತ್ತಮ ಜೀವನ ಕ್ರಮದಿಂದ ಲೈಂಗಿಕ ಕ್ರಿಯೆಯನ್ನ ಸುಧಾರಿಸಬಹುದು ಎಂಬ ವಿಚಾರವನ್ನ ಅರ್ಥ ಮಾಡಿಕೊಳ್ಳಬಹುದು. ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಸರಿಯಾದ ನಿದ್ರೆ ಹಾಗೂ ಸ್ವಲ್ಪ ವ್ಯಾಯಾಮ ಪುರುಷರ ಲೈಂಗಿಕ ಸುಖವನ್ನ ಹೆಚ್ಚಿಸಬಲ್ಲದು..!
ಆರ್ಯುವೇದದಲ್ಲೂ ಅಡಗಿದೆ ಉತ್ತಮ ಲೈಂಗಿಕ ಕ್ರಿಯೆಯ ಗುಟ್ಟು..!
ಆರ್ಯುವೇದದಲ್ಲಿ ಅಶ್ವಗಂಧದ ಸೇವನೆಯಿಂದ ಲೈಂಗಿಕ ಕ್ರಿಯೆ ಶಕ್ತಿ ಸುಧಾರಿಸಲಿದೆ ಎಂದು ಹೇಳುತ್ತಾರೆ. ಅಶ್ವಗಂಧಕ್ಕೆ ಒತ್ತಡವನ್ನ ನಿವಾರಿಸುವ ಶಕ್ತಿ ಇರೋದ್ರಿಂದ ಉತ್ತಮ ನಿದ್ರೆ ಬರಲಿದೆ. ಇದರಿಂದ ಲೈಂಗಿಕ ಆರೋಗ್ಯ ಸುಧಾರಿಸಲಿದೆ.
ನಿದ್ರೆಯ ಕೊರತೆ ಹಾಗೂ ಅತಿಯಾದ ನಿದ್ರೆಯಿಂದಾಗಿ ಪುರುಷರ ಟೆಸ್ಟೋಸ್ಟಿರಾನ್ ಹಾರ್ಮೋನ್ ಇಳಿಕೆಯಾಗಲಿದೆ. ಪ್ರೌಢಾವಸ್ಥೆಯಲ್ಲಿ ಪುರುಷರಲ್ಲಿ ಹೇರಳವಾಗಿರುವ ಟೆಸ್ಟೋಸ್ಟಿರಾನ್ ಹಾರ್ಮೋನ್ 40 ವರ್ಷ ದಾಟುತ್ತಿದ್ದಂತೆಯೇ ಕ್ರಮೇಣ ಕ್ಷೀಣಿಸಲು ಆರಂಭಿಸುತ್ತೆ. ಲೈಂಗಿಕ ಕ್ರಿಯೆಯ ಜೊತೆ ಟೆಸ್ಟೋಸ್ಟಿರಾನ್ ಹಾರ್ಮೋನ್ ನೇರ ಸಂಬಂಧ ಹೊಂದಿರೋದ್ರಿಂದ ಸೆಕ್ಸ್ನಲ್ಲಿ ಆಸಕ್ತಿ ಕಡಿಮೆ, ಶಿಶ್ನ ನಿಮಿರದೇ ಇರೋದು ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಲೈಂಗಿಕ ಆರೋಗ್ಯವನ್ನ ಸುಧಾರಿಸಲು ಆರ್ಯುವೇದದಲ್ಲಿ ಬಳಕೆಯಾಗಲ್ಪಡುವ ಪದಾರ್ಥಗಳಲ್ಲಿ ಶಿಲಾಜಿತ್ ಕೂಡ ಹೌದು. ಇದರಿಂದ ಲೈಂಗಿಕ ಆರೋಗ್ಯ ಸುಧಾರಿಸಲಿದೆ.
ಯೋಗದಿಂದಲೂ ಸುಧಾರಿಸಲಿದೆ ಲೈಂಗಿಕ ಆರೋಗ್ಯ
ಬಹುತೇಕ ಎಲ್ಲಾ ಆರ್ಯುವೇದ ವೈದ್ಯರು ಉತ್ತಮ ಲೈಂಗಿಕ ಜೀವನಕ್ಕಾಗಿ ಯೋಗಾಸನಗಳನ್ನ ಮಾಡುವಂತೆ ಸಲಹೆ ನೀಡುತ್ತಾರೆ. ಕುಂಭಾಸನ, ಧನುರಾಸನ, ಉತ್ತಾನಪಾದಸಾನ, ಪಶ್ಚಿಮೋತ್ತಾಸನ, ನೌಕಾಸನಗಳು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಸಹಕಾರಿ.