ಬಾಳೆಹಣ್ಣು – 2
ಸೇಬು-1
ಸೀಬೆ ಕಾಯಿ -1
ದಾಳಿಂಬೆ – 1/2
ಕಿವಿ ಹಣ್ಣು-1
ಮರಸೇಬು – 1
ನಿಂಬೆ ರಸ – 4 ಟೀ ಚಮಚ
ಕಲ್ಲುಪ್ಪು – ರುಚಿಗೆ
ಚಾಟ್ ಮಸಾಲ – 1/2 ಟೀ ಚಮಚ
ಮಾಡುವ ವಿಧಾನ
ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್‍ನಲ್ಲಿ ಇರಿಸಿ. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
ಮರಸೇಬು ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ. ಈ ಎಲ್ಲಾ ಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ ನಿಂಬೆ ರಸವನ್ನು ಸೇರಿಸಿ. ನಂತರ ಕಲ್ಲುಪ್ಪನ್ನು ಹಾಕಿ. ಚಾಟ್ ಮಸಾಲವನ್ನು ಸೇರಿಸಿ. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.