ಟೀ ತುಂಬಾ ಇಷ್ಟಪಟ್ಟು ಸೇ ಮಸಾಲ ಟೀ ಮಾಡಿಕೊಂಡು ಕುಡಿಯಿರಿ. ಇದು ಆರೋಗ್ಯಕ್ಕೂ ಒಳ್ಳೆಯದು. ಈ ಪುಡಿ ಮಾಡಿಕೊಂಡು ಒಂದು ಡಬ್ಬಕ್ಕೆ ಹಾಕಿಕೊಂಡು ಇಡಿ. ಟೀ ಮಾಡುವಾಗ ಇದನ್ನು ಹಾಕಿ.
¼ ಕಪ್-ಕಾಳುಮೆಣಸಿನ ಕಾಳು, ¼ ಕಪ್-ಒಣಶುಂಠಿ, 20-ಏಲಕ್ಕಿ, 3 ಇಂಚಿನಷ್ಟು-ಚಕ್ಕೆ, 20-ಲವಂಗ, ½ ಟೀ ಸ್ಪೂನ್-ತುರಿದ ಜಾಯಿಕಾಯಿ.
ತೊಳೆದು ಒಣಗಿಸಿದ ಮಿಕ್ಸಿ ಜಾರಿಗೆ ಕಾಳುಮೆಣಸು, ಏಲಕ್ಕಿ, ಚಕ್ಕೆ, ಜಾಯಿಕಾಯಿ ತುರಿ, ಲವಂಗ, ಒಣ ಶುಂಠಿ ಯನ್ನು ಹಾಕಿ ನಯವಾಗಿ ಪುಡಿ ಮಾಡಿಕೊಳ್ಳಿ, ನಂತರ ಇದನ್ನು ಜರಡಿ ಹಿಡಿದುಕೊಳ್ಳಿ.
ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಡಿ. ಟೀ ಮಾಡುವಾಗ ಟೀ ಪುಡಿ ಜತೆ ಇದನ್ನು ½ ಟೀ ಸ್ಪೂನ್ ಹಾಕಿ ಕುದಿಸಿ ಹಾಲು, ಸಕ್ಕರೆ ಸೇರಿಸಿ. ರುಚಿಕರವಾದ ಮಸಾಲ ಟೀ ರೆಡಿ.